ಪ್ಯಾಲೆಸ್ತೀನ್ ಕಛೇರಿಯಲ್ಲಿ ಭಾರತದ ರಾಯಭಾರಿ ಶವವಾಗಿ ಪತ್ತೆ…!

(ನ್ಯೂಸ್ ಕಡಬ) newskadaba.com ನವದೆಹಲಿ, ಮಾ. 07. ಪ್ಯಾಲೆಸ್ತೀನ್‌ನಲ್ಲಿ ಭಾರತದ ಪ್ರತಿನಿಧಿ ಮುಕುಲ್ ಆರ್ಯ ಅವರ ಮೃತದೇಹ ರಮಲ್ಹಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಪತ್ತೆಯಾಗಿದೆ. 2008 ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿ ಆರ್ಯ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.


ಮುಕುಲ್ ಸಾವಿಗೆ ಆಘಾತ ವ್ಯಕ್ತಪಡಿಸಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್ , “ರಮಲ್ಹಾದಲ್ಲಿ ಭಾರತದ ಪ್ರತಿನಿಧಿಯ ಅಗಲಿಕೆಯ ವಿಷಯ ತಿಳಿದು ತೀವ್ರ ಆಘಾತವಾಯಿತು. ಅವರೊಬ್ಬ ಉಜ್ವಲ ಮತ್ತು ಪ್ರತಿಭಾವಂತ ಅಧಿಕಾರಿಯಾಗಿದ್ದರು ಎಂದು ಟ್ವೀಟ್ ಮಾಡಿದ್ದಾರೆ. ಮುಕುಲ್ ಆರ್ಯ ಅವರು ಕರ್ತವ್ಯದಲ್ಲಿರುವಾಗಲೇ ನಿಧನರಾಗಿರುವ ಬಗ್ಗೆ ಪ್ಯಾಲಸ್ತೀನ್ ಆಡಳಿತ ವ್ಯಕ್ತಪಡಿಸಿದೆ.

Also Read  ದೂರವಾಣಿ ಕರೆಮಾಡಿ ಜೀವಬೆದರಿಕೆ- ದೂರು ದಾಖಲು

error: Content is protected !!
Scroll to Top