16 ವರ್ಷಗಳ ಹಿಂದೆ ಮನೆಯಿಂದ ಚಿನ್ನಾಭರಣ ಕದ್ದೊಯ್ದ ಪ್ರಕರಣ ➤ ಆರೋಪಿಗೆ 9 ವರ್ಷ ಜೈಲು ಶಿಕ್ಷೆ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 04. 16 ವರ್ಷಗಳ ಹಿಂದೆ ಪುತ್ತೂರಿನ ಮೊಟ್ಟೆತ್ತಡ್ಕ ನಿವಾಸಿ ಮಹೇಂದ್ರ ಕುಮಾರ್ ಎಂಬವರ ಮನೆಯ ಬಾಗಿಲಿನ ಬೀಗ ತುಂಡರಿಸಿ 43,000 ರೂ. ಹಾಗೂ 50.930 ಗ್ರಾಂ ತೂಕದ ಚಿನ್ನಾಭರಣ ಕಳವುಗೈದ ಪ್ರಕರಣದ ಆರೋಪಿಗೆ ಪುತ್ತೂರಿನ ನ್ಯಾಯಾಲಯವು 9 ವರ್ಷಗಳ ಕಾಲ ಜೈಲು ಶಿಕ್ಷೆ ಘೋಷಿಸಿದೆ.

ಶಿಕ್ಷೆಗೊಳಗಾದ ಆರೋಪಿಯನ್ನು ಮಂಗಳೂರು ತಾಲೂಕಿನ ಸುರತ್ಕಲ್ ಬಳಿಯ ವಿದ್ಯಾನಗರ ಹೊನ್ನಕಟ್ಟೆಯ ನಾಗರಾಜ್ ಬಳೆಗಾರ ಎಂದು ಗುರುತಿಸಲಾಗಿದೆ. ಸದ್ಯ ಈತ ಇನ್ನೊಂದು ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ಕಲ್ಬುರ್ಗಿ ಕಾರಾಗೃಹದಲ್ಲಿ ಬಂಧನದಲ್ಲಿರುವುದಾಗಿ ತಿಳಿದುಬಂದಿದೆ. ಘಟನೆಯ ಸಂದರ್ಭದಲ್ಲಿ ಆರೋಪಿಗಳಿಬ್ಬರ ಪೈಕಿ ಸಂತೋಷ್ ಎಂಬಾತ 12 ವರ್ಷದ ಬಾಲಕನಾಗಿದ್ದು, ಹಾಗಾಗಿ ಆತನ ವಿಚಾರಣೆ ಬಾಲ ನ್ಯಾಯಾಲಯದಲ್ಲಿ ನಡೆದಿತ್ತು. ಇನ್ನೋರ್ವ ಆರೋಪಿ ನಾಗರಾಜ್ ಬಳೆಗಾರ 18 ವರ್ಷದ ಯುವಕನಾಗಿದ್ದ. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ನಾಗರಾಜ್ ಬಳೆಗಾರ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿದೆ.

Also Read  ಏಕಕಾಲಕ್ಕೆ ಹಿಂಜಾವೇ ರಾಜ್ಯ ಖಾತೆ ಹಾಗೂ 20ಕ್ಕೂ ಹೆಚ್ಚು ಮುಖಂಡರ ಫೇಸ್ ಬುಕ್ ಅಕೌಂಟ್ ಡಿಲೀಟ್..?

error: Content is protected !!
Scroll to Top