ಉಕ್ರೇನ್ ನಿಂದ ಸುರಕ್ಷಿತವಾಗಿ ಮಂಗಳೂರಿಗೆ ಮರಳಿದ ಅನುಷಾ ಭಟ್..!!

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 03. ಉಕ್ರೇನ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ನಗರದ ಬಿಜೈ ನಿವಾಸಿ ಅನುಷಾ ಭಟ್ ಅವರು ಗುರುವಾರದಂದು ಮಂಗಳೂರಿಗೆ ತಲುಪಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಉಕ್ರೇನ್ ಸೈನಿಕರು ನಮ್ಮನ್ನು ಗಡಿಯವರೆ ಬಿಟ್ಟರು. ಬಳಿಕ ನಾವು ರೊಮೇನಿಯಾಕ್ಕೆ ತೆರಳಿ ಅಲ್ಲಿನ ಆಶ್ರಯ ಕೇಂದ್ರದಲ್ಲಿ ಉಳಿದುಕೊಂಡಿದ್ದೆವು. ನಂತರ ಅಲ್ಲಿಂದ ಭಾರತೀಯ ಅಧಿಕಾರಿಗಳು ಮುಂಬೈಗೆ ವಿಮಾನ ವ್ಯವಸ್ಥೆ ಕಲ್ಪಿಸಿದ್ದು, ಇದೀಗ ಮುಂಬೈನಿಂದ ಇಲ್ಲಿಗೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ. ತಂದೆ ಹರೀಶ್ ಚಂದ್ರ ಹಾಗೂ ತಾಯಿ ವಿದ್ಯಾ ಭಟ್ ವಿಮಾನ ನಿಲ್ದಾಣದಲ್ಲಿ ಮಗಳನ್ನು ಬರಮಾಡಿಕೊಂಡರು.

Also Read  ಗ್ರಾನೈಟ್ ಮೈಮೇಲೆ ಬಿದ್ದು ಕಾರ್ಮಿಕರಿಬ್ಬರು ದುರ್ಮರಣ

error: Content is protected !!
Scroll to Top