ಸುಳ್ಯ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಬೆಂಕಿ..! ➤ ಕೆಲಸಗಾರನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

(ನ್ಯೂಸ್ ಕಡಬ) newskadaba.com ಅರಂತೋಡು, ಮಾ. 03. ಅರಂತೋಡು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಸಮೀಪ ತೆಕ್ಕಿಲ್ ಸಮುದಾಯ ಭವನ ಮುಂಭಾಗದಲ್ಲಿರುವ ವಿದ್ಯುತ್ ಟ್ರಾನ್ಸ್‌‌ ಫೋರ್ಟ್ ಕಂಬದಿಂದ ಶಾರ್ಟ್ ಸರ್ಕ್ಯೂಟ್‌ ಉಂಟಾಗಿ ಬೆಂಕಿ ಅವರಿಸಿದ್ದು, ಸಮುದಾಯದ ಕೆಲಸಗಾರನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

ತೆಕ್ಕಿಲ್ ಪ್ರತಿಷ್ಠಾನ ಕಾರ್ಯದರ್ಶಿ ಅಶ್ರಫ್ ಗುಂಡಿ, ಹೆಚ್.ಪಿ.ಗ್ಯಾಸ್ ಕಚೇರಿ ಮ್ಯಾನೇಜರ್ ಧನುರಾಜ್, ಸಮುದಾಯ ಭವನ ಮೇಲ್ವಿಚಾರಕ ಲತೀಫ್, ಆಶಿಕ್ ಕುಕ್ಕುಂಬಳ, ಉಮ್ಮರ್ ಎ ಹಾಗೂ ತಾಜುದ್ದೀನ್ ಅರಂತೋಡು ವಿಷಯ ತಿಳಿದ ತಕ್ಷಣ ಧಾವಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.

Also Read  ಕಡಬದ ಜನತೆಗೆ ಸಂತಸದ ಸುದ್ದಿ ➤ ಕ್ವಾರಂಟೈನ್ ನಲ್ಲಿದ್ದ 22 ಮಂದಿಯ ಕೊರೋನಾ ವರದಿಗಳೂ ನೆಗೆಟಿವ್

error: Content is protected !!
Scroll to Top