ಪುತ್ತೂರು: ಎರಡು ದಿನಗಳ ಹಿಂದೆ ಕಳವುಗೈದ ಅಡಿಕೆಯನ್ನು ವಾಪಾಸು ತಂದಿಟ್ಟ ಕಳ್ಳರು…!!!!

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ. 03. ಎರಡು ದಿನಗಳ ಹಿಂದೆ ಅಂಗಡಿಯಿಂದ ಅಡಿಕೆ ಕದ್ದೊಯ್ದ ಕಳ್ಳರು ಮರುದಿನ ಅದೇ ಅಂಗಡಿಯ ಮುಂಭಾಗದಲ್ಲಿ ಇಟ್ಟು ಹೋಗಿರುವ ವಿಚಿತ್ರ ಘಟನೆ ತಿಂಗಳಾಡಿಯಲ್ಲಿ ನಡೆದಿದೆ.


ತಿಂಗಳಾಡಿಯ ಶಾಲೆಯ ಬಳಿಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದ ಜಗನ್ನಾಥ ರೈ ಎಂಬವರ ಅಂಗಡಿಯ ಹಿಂಬಾಗಿಲ ಚಿಲಕ ಮುರಿದ ಕಳ್ಳರು ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ ಸುಮಾರು 60,000 ರೂ. ಮೌಲ್ಯದ 4 ಗೋಣಿ ಚೀಲ ಅಡಿಕೆಯನ್ನು ಮಾ. 01ರಂದು ರಾತ್ರಿಯ ವೇಳೆ ಕದ್ದೊಯ್ದಿದ್ದರು. ಈ ಕುರಿತು ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದರ ನಡುವೆ ಕಳ್ಳತನವಾಗಿದ್ದ ನಾಲ್ಕು ಗೋಣಿ ಅಡಿಕೆಯನ್ನು ಮಾ. 2ರ ರಾತ್ರಿ ಕಳ್ಳರು ಅಂಗಡಿಯ ಮುಂದೆ ಇಟ್ಟು ಹೋಗಿದ್ದು ಮಾ.3ರಂದು ಬೆಳಗ್ಗೆ ಮಾಲಕ ಅಂಗಡಿಗೆ ಬಂದು ಅಡಿಕೆಯನ್ನು ಕಂಡು ಆಶ್ಚರ್ಯಗೊಂಡಿದ್ದಾರೆ.

Also Read  ಗೊಂದಲಗಳ ಮಧ್ಯೆ ಆರಂಭವಾದ ಉಸ್ತುವಾರಿ ಸಚಿವರ 'ಸಾಮರಸ್ಯ ನಡಿಗೆ' ► ಫರಂಗಿಪೇಟೆಯಲ್ಲಿ ಬಸ್‍ಗಳ ಮೇಲೆ ಕಲ್ಲು ತೂರಾಟ

error: Content is protected !!
Scroll to Top