ಕಡಬ ತಾಲೂಕಿನ ವಿವಿಧ ಕಾಮಗಾರಿಗಳಿಗೆ ಸಚಿವ ಅಂಗಾರರಿಂದ ಚಾಲನೆ

(ನ್ಯೂಸ್ ಕಡಬ) newskadaba.com ಕಡಬ, ಮಾ. 03. ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು ಗುದ್ದಲಿ ಪೂಜೆಯನ್ನು ಬಂದರು, ಮೀನುಗಾರಿಕೆ ಮತ್ತು ಒಳನಾಡು ಸಚಿವ ಎಸ್.ಅಂಗಾರ ಅವರು ನೆರವೇರಿಸಿದರು.


ಕೊಂಡಾಡಿಕೊಪ್ಪ ಸಂಪರ್ಕ ರಸ್ತೆ, ಆಲಂಕಾರು ಗ್ರಾಮದ ಉಜುರ್ಲಿ ಕಕ್ವೆ ರಸ್ತೆ, ಇಚ್ಲಂಪಾಡಿ ಗ್ರಾಮದ ಕೊರಮೇರು ಕರ್ತಡ್ಕ ಸೇತುವೆ, ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಸ್.ಸಿ ಕಾಲೊನಿ ರಸ್ತೆ, ರಾಮನಗರ- ಕೋಡಿಯಡ್ಕ ಎಸ್.ಸಿ ಕಾಲೋನಿ ರಸ್ತೆ, ಕೌಕ್ರಾಡಿ ಗ್ರಾಮದ ಕಾಪಿನಮೂಲೆ- ನೆಲ್ಲಿತ್ತಡ್ಕ ಪರಿಶಿಷ್ಟ ಜಾತಿ ಕಾಲೊನಿ ರಸ್ತೆ, ಶಿರಾಡಿ ಗ್ರಾಮದ ಪೇರಮಜಲು ಪ.ಜಾ ಕಾಲೊನಿ ರಸ್ತೆ, ಹೊಸವಕ್ಲು- ಹುಣ್ಸೆಬೆಟ್ಟು ತೋಡಿಗೆ ತಡೆಗೋಡೆ, ಕೇಪು ಶ್ರೀಲಕ್ಷ್ಮೀ ಜನಾರ್ಧನ ದೇವಸ್ಥಾನದ ತಡೆಗೋಡೆ, ರೆಂಜಿಲಾಡಿ ಗ್ರಾಮದ ಮೀನಾಡಿ ಎಸ್ಸಿ ರಸ್ತೆ ಸೇರಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಅಲ್ಲದೇ ನೆಲ್ಯಾಡಿ ಗ್ರಾ.ಪಂ ಗ್ರಂಥಾಲಯ, ನೆಲ್ಯಾಡಿ ಗ್ರಾ.ಪಂ. ವತಿಯಿಂದ ನಿರ್ಮಿಸಲಾದ ಗೋದಾಮು ಕಟ್ಟಡ, ಬೆಥನಿ ಶಾಲೆಯ ರಸ್ತೆ ಇಂಟರ್ ಲಾಕ್, ರೆಂಜಿಲಾಡಿ ಗ್ರಾಮದ ಸರೋಳಿ ಪೆಲತ್ರಾಣಿ ಎಸ್‌ಸಿ ಕಾಲೊನಿ ರಸ್ತೆ ಹಾಗೂ ಕಾಜರಕಟ್ಟೆ- ಅಳಂಗಾಜೆ ರಸ್ತೆಯ ಉದ್ಘಾಟನೆಯನ್ನು ಸಚಿವರು ಇದೇ ಸಂದರ್ಭದಲ್ಲಿ ನೆರವೇರಿಸಿದರು.

Also Read  ಉಡುಪಿ: ಶ್ರೀಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವ ಆಚರಣೆ

error: Content is protected !!
Scroll to Top