ಅಂಕೋಲಾ ಬಸ್ ನಿಲ್ದಾಣದ ಶೌಚಾಲಯದಲ್ಲಿ ಒಂದೂವರೆ ಗಂಟೆಗಳ ಕಾಲ ಮಲಗಿದ ಕರಾವಳಿಯ ವ್ಯಕ್ತಿ..!!!

(ನ್ಯೂಸ್ ಕಡಬ) newskadaba.com ಅಂಕೋಲಾ, ಮಾ. 03. ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಬಸ್ ಸ್ಟ್ಯಾಂಡ್ ಹಿಂಬದಿಯಲ್ಲಿರುವ ಶೌಚಾಲಯದ ಒಳಗಡೆ ಹೋಗಿ ಬಾಗಿಲು ಹಾಕಿಕೊಂಡು ಮಲಗಿದ್ದ ಘಟನೆ ಅಂಕೋಲಾ ಬಸ್ ನಿಲ್ದಾಣದಲ್ಲಿ ನಡೆದಿದೆ.

ಅಂಕೋಲಾದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಟಾಯ್ಲೆಟ್ ಗೆ ಪ್ರವೇಶಿಸಿದ ವ್ಯಕ್ತಿ ಒಳಗಡೆಯಿಂದ ಚಿಲಕ ಹಾಕಿಕೊಂಡಿದ್ದು, ಸುಮಾರು ಒಂದು ಗಂಟೆ ಕಳೆದರೂ ಹೊರಗೆ ಬರದೇ ಇದ್ದುದರಿಂದ ಬಾಗಿಲು ತಟ್ಟಿದರೂ ಒಳಗಡೆಯಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಈ ಹಿನ್ನೆಲೆ ಹಿಂಬದಿಯಲ್ಲಿರುವ ಸಣ್ಣ ಕಿಂಡಿಯ ಮೂಲಕ ಮೊಬೈಲ್ ತೂರಿಸಿ ವಿಡಿಯೋ ಮಾಡಿ ನೋಡಿದಾಗ ಒಳಗಡೆ ವ್ಯಕ್ತಿ ಮೃತಪಟ್ಟ ರೀತಿಯಲ್ಲಿ ಬಿದ್ದುಕೊಂಡಿರುವುದು ಕಂಡುಬಂದಿದೆ. ಇದರಿಂದ ಆತಂಕಗೊಂಡ ನಿರ್ವಹಣಾ ಸಿಬ್ಬಂದಿ ವಿಷಯವನ್ನು ಬಸ್ ನಿಲ್ದಾಣದ ನಿಯಂತ್ರಕರ ಗಮನಕ್ಕೆ ತಂದಿದ್ದು, ತಕ್ಷಣವೇ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಬಾಗಿಲು ಬಡಿದರೂ ಒಳಗಡೆಯಿಂದ ಯಾವುದೇ ರೀತಿಯ ಸ್ಪಂದನೆ ದೊರಕದ ಹಿನ್ನೆಲೆ ಅಂಕೋಲಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲಿನ ಶೀಟ್ ಒಡೆದು ನೋಡಿದಾಗ ಒಳಗೆ ಬಿದ್ದಿರುವ ವ್ಯಕ್ತಿಯನ್ನು ನೋಡಿದಾಗ ಒಂದು ಕ್ಷಣ ಮೃತಪಟ್ಟ ರೀತಿಯಲ್ಲಿ ಭಾಸವಾಗಿ ಎಲ್ಲರೂ ಆತಂಕಗೊಂಡಿದ್ದಾರೆ. ಆದರೆ ವ್ಯಕ್ತಿ ಉಸಿರಾಡುತ್ತಿರುವುದನ್ನು ಗಮನಿಸಿ ತಟ್ಟಿ ಎಬ್ಬಿಸಿದಾಗ ವ್ಯಕ್ತಿ ಅಸ್ವಸ್ಥಗೊಂಡ ರೀತಿಯಲ್ಲಿ ಎದ್ದು ಕುಳಿತಿದ್ದಾರೆ ಎನ್ನಲಾಗಿದೆ. ಆತನ ಬಗ್ಗೆ ವಿಚಾರಿಸಿದಾಗ ಆತ ಮಂಗಳೂರಿನ ಕಾಪು ಮೂಲದವನಾಗಿದ್ದು, ರಾ.ಹೆ ಹುಬ್ಬಳ್ಳಿ ರಸ್ತೆಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈತ ವಿಪರೀತ ಕುಡಿತದ ಚಟ ಹೊಂದಿದ್ದರಿಂದ ಬೇಸತ್ತ ಹೋಟೆಲ್ ಮಾಲೀಕರು ಕೆಲಸದಿಂದ ತೆಗೆದು ಹಾಕಿದ್ದರು ಎನ್ನುವ ಮಾಹಿತಿ ದೊರಕಿದ್ದು ಕುಡಿದ ಮತ್ತಿನಲ್ಲಿ ಹಾಗೂ ನಿದ್ರೆಯ ಮಂಪರಿನಲ್ಲಿದ್ದ ಕಾರಣ ಶೌಚಾಲಯದಲ್ಲಿ ಮಲಗಿರುವುದಾಗಿ ತಿಳಿದು ಬಂದಿದೆ.‌

Also Read  ಕಡಬ: ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಸೂಕ್ತ ಕ್ರಮಕ್ಕೆ ಆಗ್ರಹ ➤ ತಾಲೂಕು ಪತ್ರಕರ್ತರ ಸಂಘದಿಂದ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ

error: Content is protected !!
Scroll to Top