ಭಾರತೀಯ ಸಹೋದರರನ್ನು ಕೂಡಲೇ ತಾಯ್ನಾಡಿಗೆ ಕರೆತನ್ನಿ ➤ ಖಿದ್ಮಾ ಸಂಚಾಲಕ ಅಮೀರ್ ಬನ್ನೂರು ಅಭಿಪ್ರಾಯ

(ನ್ಯೂಸ್ ಕಡಬ) newskadaba.com ಮಾ. 03. ಉಕ್ರೇನ್‌ ದೇಶದಲ್ಲಿ ರಷ್ಯಾ ಸೇನೆಯ ದಾಳಿಗೆ ಬಲಿಯಾದ ಕರ್ನಾಟಕದ ಹಾವೇರಿ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿ ಸಹೋದರ ನವೀನ್ ಬಲಿಯಾಗಿರುವುದು‌ ಅತ್ಯಂತ ದುರದೃಷ್ಟಕರ. ಕುಟುಂಬದ ಒಬ್ಬ ಸದಸ್ಯರನ್ನು ಕಳೆದುಕೊಂಡ ಆ ಕುಟುಂಬಸ್ಥರ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ. ಮಗನ ಸಾವಿನಿಂದ ನೊಂದುಕೊಂಡ ಕುಟುಂಬಕ್ಕೆ ನನ್ನ ಸಂತಾಪಗಳು. ರಷ್ಯಾ ಸೇನೆಯ ಅಟ್ಟಹಾಸ ತಾರಕಕ್ಕೇರುವಾಗಲೇ ಉಕ್ರೇನ್ ನಲ್ಲಿ ನೆಲೆಸಿದ್ದ ಕನ್ನಡಿಗರು ಹಾಗೂ ಭಾರತದ ವಿವಿಧ ಭಾಗಗಳಿಂದ ಹೋದಂತಹ ಸಹೋದರ ಬಂಧು-ಮಿತ್ರರನ್ನು ಸರಕಾರ ಕೂಡಲೇ ತಾಯಿನಾಡಿಗೆ ಕರೆತರುವ ಪ್ರಯತ್ನ ಹಾಗೂ ಕೆಲಸ ಮಾಡಬೇಕಿತ್ತು. ನವೀನ್ ಅವರ ಬದುಕಿಗೂ ತೊಂದರೆಯಾಗುತ್ತಿರಲಿಲ್ಲ. ರಾಜ್ಯ ಹಾಗೂ ಕೇಂದ್ರ ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವೇ ಸಾವಿಗೆ ಕಾರಣ. ಇನ್ನಾದರೂ ಸರಕಾರ ಎಚ್ಚೆತ್ತುಕೊಂಡು ಯುಕ್ರೇನ್ ನಲ್ಲಿ ನೆಲೆಸಿರುವ ಕನ್ನಡಿಗರು ಹಾಗೂ ಭಾರತೀಯ ಸಹೋದರರನ್ನು ಕೂಡಲೇ ಕರೆತರುವ ಕಾರ್ಯಗಳು ನಡೆಯಬೇಕು ಅದರೊಂದಿಗೆ ಅವರ ಜೀವಕ್ಕೆ ಹಾನಿ ಉಂಟಾಗದ ರೀತಿಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕ ಆಮಿರ್ ಬನ್ನೂರು ಅಭಿಪ್ರಾಯಪಟ್ಟರು.

Also Read  ವಾಲ್ಮಿಕಿ ನಿಗಮ ಹಗರಣ ಪ್ರಕರಣ ಮಾಜಿ ಸಚಿವ ನಾಗೇಂದ್ರ ಆಪ್ತರ ಮನೆ ಮೇಲೆ ದಾಳಿ

error: Content is protected !!
Scroll to Top