ಉಕ್ರೇನ್ ನಲ್ಲಿ ಭಾರತೀಯ ಇನ್ನೋರ್ವ ವಿದ್ಯಾರ್ಥಿ ಮೃತ್ಯು..!!

(ನ್ಯೂಸ್ ಕಡಬ) newskadaba.com ಉಕ್ರೇನ್, ಮಾ. 02. ಉಕ್ರೇನ್ ಮೇಲಿನ ರಷ್ಯಾ ದಾಳಿಯ ಪರಿಣಾಮ ಭಾರತದ ಇನ್ನೊಬ್ಬ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

 

ಮೃತ ವಿದ್ಯಾರ್ಥಿಯನ್ನು ಪಂಜಾಬ್​​ ಮೂಲದ ಚಂದನ್ ಜಿಂದಾಲ್ (22) ಎಂದು ಗುರುತಿಸಲಾಗಿದೆ. ಈತ ಉಕ್ರೇನ್ ನ ಲ್ಲಿರುವ ವಿನ್ನಿಟ್ಸಿಯಾ ಮೆಮೋರಿಯಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ಕೋರ್ಸ್​ ಮಾಡುತ್ತಿದ್ದ. ಈತನಿಗೆ ಪಾರ್ಶವಾಯು ಉಂಟಾದ ಪರಿಣಾಮ ಅವನನ್ನು ವಿನ್ನಿಟ್ಸಿಯಾದ ಆಸ್ಪತ್ರೆಯಲ್ಲಿ ತುರ್ತು ನಿಗಾಘಟಕಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ಈಗಾಗಲೇ ಮಾಹಿತಿ ತಿಳಿಸಲಾಗಿದ್ದು, ಚಂದನ್ ಮೃತದೇಹವನ್ನು ಭಾರತಕ್ಕೆ ತರುವಂತೆ ಅವರ ತಂದೆ, ಕೇಂದ್ರ ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಿದ್ದಾರೆ.

Also Read  ಮನಿಲಾ ಪ್ರಯಾಣಿಕ ಹಡಗಿನಲ್ಲಿ ಬೆಂಕಿ ➤ 31 ಮಂದಿ ಸಜೀವದಹನ ಹಲವರು ನಾಪತ್ತೆ..!

 

error: Content is protected !!
Scroll to Top