ಬೆಳ್ಳಾರೆ: ಗುಡ್ಡ ಬೆಂಕಿಗಾಹುತಿ ➤ ಊರವರಿಂದ ಬೆಂಕಿ ನಂದಿಸಲು ಹರಸಾಹಸ – ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮಾ. 02. ಇಲ್ಲಿನ ತಡಗಜೆ ಎಂಬಲ್ಲಿ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಹೊತ್ತಿ ಉರಿದ ಘಟನೆ ಬುಧವಾರದಂದು ನಡೆದಿದೆ.

ಬೆಳ್ಳಾರೆ ಬಸ್ ನಿಲ್ದಾಣದ ಹಿಂಭಾಗದ ಗುಡ್ಡದಲ್ಲಿ ಬುಧವಾರ ಅಪರಾಹ್ನ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಸಂಪೂರ್ಣವಾಗಿ ವ್ಯಾಪಿಸಿದೆ. ಸ್ಥಳೀಯರು ಹರಸಾಹಸಪಟ್ಟು ಬೆಂಕಿಯನ್ನು ನಂದಿಸಲು ಯತ್ನಿಸಿದರಾದರೂ ಹತೋಟಿಗೆ ಬಂದಿರಲಿಲ್ಲ. ಕೊನೆಗೆ ಸುಳ್ಯದಿಂದ ಅಗ್ನಿ ಶಾಮಕದಳದವರು ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಪತ್ರಕರ್ತನ ಮನೆಯ ಮುಂದೆ ಗುಂಡು ಸೂಜಿ ಚುಚ್ಚಿದ ಸೌತೆಕಾಯಿ ► ವಾಮಾಚಾರ ಮಾಡಿರುವ ಶಂಕೆ

error: Content is protected !!
Scroll to Top