ಉಕ್ರೇನ್ ನಲ್ಲಿ ಸಿಲುಕಿದ ವಿದ್ಯಾರ್ಥಿಗಳ ಮನೆಗೆ ಶಾಸಕ ಹಾಗೂ ಸಂಸದ ಭೇಟಿ…!

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 02. ಯುದ್ಧ ಪೀಡಿತ ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಂಗಳೂರು ಮೂಲದ ಇಬ್ಬರು ವಿದ್ಯಾರ್ಥಿಗಳ ಮನೆ ಸಂಸದ ನಳಿನ್ ಕುಮಾರ್ ಹಾಗೂ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಬುಧವಾರದಂದು ಭೇಟಿ ನೀಡಿ ಧೈರ್ಯ ತುಂಬಿದರು.


ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಐವರು ವಿದ್ಯಾರ್ಥಿಗಳ ಮನೆಗಳ ಪೈಕಿ ಇಬ್ಬರ ಮನೆಗೆ ಈಗಾಗಲೇ ಭೇಟಿ ನೀಡಲಾಗಿದ್ದು, ಪೋಷಕರಿಗೆ ಧೈರ್ಯ ನೀಡಲಾಗಿದೆ. ಇನ್ನು ಇಬ್ಬರು ವಿದ್ಯಾರ್ಥಿಗಳ ಮನೆಗೆ ಇಂದೇ ತೆರಳಲಾಗುವುದು. ಓರ್ವನ ಮನೆಯಲ್ಲಿ ಯಾರೂ ಇಲ್ಲದ ಕಾರಣ ಗುರುವಾರದಂದು ಹೋಗಿ ಪೋಷಕರ ಜೊತೆ ಮಾತನಾಡಿ ಆತ್ಮವಿಶ್ವಾಸ ತುಂಬಲಾಗುವುದು ಎಂದರು. ವಿದ್ಯಾರ್ಥಿಗಳ ಮನೆಯವರಿಗೆ ಧೈರ್ಯ ತುಂಬುವ ಸಲುವಾಗಿ ಈಗಾಗಲೇ ಬಿಜೆಪಿ ವತಿಯಿಂದ ವಾರ್ ರೂಂ ಕೂಡಾ ತೆರೆಯಲಾಗಿದ್ದು, ಮಾಹಿತಿ ಪಡೆಯಲಾಗುತ್ತಿದೆ ಎಂದರು.

Also Read  ನೇಜಿ ನಾಟಿಗಾಗಿ ಗದ್ದೆಗಿಳಿದ ಪಿಜಕ್ಕಳ ಸರಕಾರಿ ಶಾಲಾ ಮಕ್ಕಳು

error: Content is protected !!
Scroll to Top