ಸುಳ್ಯ: ಕಟ್ಟಿಂಗ್ ಮೆಷಿನ್ ತಾಗಿ ತೀವ್ರ ರಕ್ತಸ್ರಾವ..! ➤ ಕಾರ್ಮಿಕ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಮಾ. 02. ಕಟ್ಟಿಂಗ್ ಮೆಷಿನ್ ತಾಗಿ ಗಂಭೀರ ಗಾಯಗೊಂಡ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಐವರ್ನಾಡಿನಿಂದ ವರದಿಯಾಗಿದೆ.


ಮೃತಪಟ್ಟವರನ್ನು ಐವರ್ನಾಡು ನಾಟಿಕೇರಿ ನಿವಾಸಿ ದಯಾನಂದ(36) ಎಂದು ಗುರುತಿಸಲಾಗಿದೆ. ಇವರ ತೊಡೆಯ ಭಾಗಕ್ಕೆ ಕಟ್ಟಿಂಗ್ ಮೆಷಿನ್ ತಾಗಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಇವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ತೀವ್ರ ರಕ್ತಸ್ರಾವದಿಂದ ಮೃತಪಟ್ಟರು ಎಂದೆನ್ನಲಾಗಿದೆ.

error: Content is protected !!
Scroll to Top