ಗೂಡು ಮುರಿದು 75 ಕೆಜಿಯಷ್ಟು ಕೋಳಿ ಕಳವು…!!

(ನ್ಯೂಸ್ ಕಡಬ) newskadaba.com ಮಾಣಿ, ಮಾ. 02. ಕೋಳಿಯ ಗೂಡನ್ನು ಮುರಿದು ಸುಮಾರು 75 ಕೆಜಿಯಷ್ಟು ಕೋಳಿಯನ್ನು ಕದ್ದೊಯ್ದ ಘಟನೆ ಇಲ್ಲಿನ ಅನಂತಾಡಿ ಸಮೀಪದ ಗೋಳಿಕಟ್ಟೆಯ ಚಿಕನ್ ಸ್ಟಾಲ್ ನಲ್ಲಿ ಮಂಗಳವಾರದಂದು ನಡೆದಿದೆ.

ಎಂದಿನಂತೆ ಮಾಲಕರು ಇಂದು ಬೆಳಗ್ಗೆ ಅಂಗಡಿ ತೆರೆಯಲು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಈಗ ಕೋಳಿಗೆ ದುಬಾರಿ ಬೆಲೆ ಇದ್ದು, 160 ಅಥವಾ 170 ರೂಪಾಯಿ ಮಾರಾಟ ಬೆಲೆಯಾಗಿದೆ. ಅದೂ ಅಲ್ಲದೆ ಚಿಕನ್ ಸ್ಟಾಲ್ ಗಳೆಲ್ಲವೂ ಕಳೆದೆರಡು ತಿಂಗಳಿನಿಂದ ವ್ಯಾಪಾರವಿಲ್ಲದೆ ನಷ್ಟದಲ್ಲೇ ಮುಂದುವುರಿಯುತ್ತಿದ್ದು ಇಂತಹ ಸಂದರ್ಭದಲ್ಲಿ ಕಳ್ಳತನ ನಡೆದರೆ ಅಂಗಡಿಯವರ ಸ್ಥಿತಿ ಊಹಿಸಲೂ ಅಸಾಧ್ಯ. ಕಳ್ಳತನ ನಡೆಸಿದ ಕೋಳಿಗಳನ್ನು ಯಾವುದಾದರೂ ಅಂಗಡಿಗೆ ಮಾರಾಟ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಕಾರೊಂದು ಬಂದು ಹೋಗುವ ದೃಶ್ಯ ದಾಖಲಾಗಿದೆ. ಸ್ಥಳಕ್ಕೆ ವಿಟ್ಲ ಪೋಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

Also Read  ಉಪ್ಪಿನಂಗಡಿ: ತಾಯಿ - ಮಗು ನಾಪತ್ತೆ

error: Content is protected !!
Scroll to Top