ಬಂಟ್ವಾಳ: ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ..! ➤ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ. 02.‌ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿ ಘಟನೆ ಸಿದ್ದಕಟ್ಟೆ ಸಂತೆ ಮಾರುಕಟ್ಟೆ ಬಳಿ ನಡೆದಿದೆ.


ಬಂಧಿತರನ್ನು ಮೊಹಮ್ಮದ್ ಅಲಿ, ಮುಹಮ್ಮದ್ ಆರಿಫ್ ಹಾಗೂ ಮೊಹಮ್ಮದ್ ರವೂಫ್ ಎಂದು ಗುರುತಿಸಲಾಗಿದೆ. ಬಂಧಿತರು ಸಿದ್ದಕಟ್ಟೆ ಸಂತೆ ಮಾರುಕಟ್ಟೆ ಬಳಿ ಬಟ್ಟೆ ಅಂಗಡಿ ಮಾಡುವ ವಿಚಾರವಾಗಿ ಹೊಡೆದಾಡುತ್ತಿದ್ದರು ಎನ್ನಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಶಾಂತಿಭಂಗ ಮಾಡಿದ ಆರೋಪದಡಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

error: Content is protected !!
Scroll to Top