ಮಸೀದಿಗೆ ಅಕ್ರಮವಾಗಿ ಪ್ರವೇಶಿಸಿ ಗುರುಗಳಿಗೆ ಹತ್ಯೆ ಬೆದರಿಕೆ…! ➤ ಆರೋಪಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ. 02. ಮಸೀದಿಯೊಳಗೆ ನುಗ್ಗಿದ ವ್ಯಕ್ತಿಯೋರ್ವ ಮಸೀದಿಯ ಗುರುಗಳಿಗೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿ ಪೊಲೀಸ್ ವಶವಾದ ಘಟನೆ ಮಂಗಳವಾರ ತಡರಾತ್ರಿ ಬಿಸಿರೋಡ್ ಬಳಿಯ ಮಿತ್ತಬೈಲು ಎಂಬಲ್ಲಿ ನಡೆದಿದೆ.


ಆರೋಪಿಯನ್ನು ಬಾಬು ಪೂಜಾರಿ ಎಂದು ಗುರುತಿಸಲಾಗಿದೆ. ಈತ ರಾತ್ರಿಯ ವೇಳೆ ಮಸೀದಿಯ ಬಳಿ ದ್ವಿಚಕ್ರ ವಾಹನವನ್ನಿಟ್ಟು, ಅಕ್ರಮವಾಗಿ ಮಸೀದಿಗೆ ನುಗ್ಗಿದ್ದು, ಈ ವೇಳೆ ಮಸೀದಿಯ ಗುರುಗಳು ಆತನನ್ನು ವಿಚಾರಿಸಿದಾಗ ನಾನು ಮಸೀದಿಯ ಗುರುಗಳನ್ನು ಹತ್ಯೆ ಮಾಡಲು ಬಂದಿದ್ದು, ಹತ್ಯೆ ಮಾಡುತ್ತೇನೆ. ನನ್ನನ್ನು ನೀವು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಬಳಿಕ ಆತನ ದ್ವಿಚಕ್ರ ವಾಹನವನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ಚಾಕು ಪತ್ತೆಯಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದು ಮಸೀದಿಗೆ ರಕ್ಷಣೆ ಒದಗಿಸಿದ್ದಾರೆ.

Also Read  ಅತ್ಯಾಚಾರ ಆರೋಪ ಪ್ರಕರಣ - ಪ್ರಜ್ವಲ್ ರೇವಣ್ಣಗೆ ಇನ್ ಕ್ಯಾಮರಾ ವಿಚಾರಣೆ ನಡೆಸುವಂತೆ ರಾಜ್ಯ ಸರಕಾರ ಮನವಿ

error: Content is protected !!
Scroll to Top