ಉದ್ಯೋಗ ಮಾಡು ಎಂದು ಸಲಹೆ ನೀಡಿದ ತಂದೆಗೆ ದೊಣ್ಣೆಯಿಂದ ಹೊಡೆದ ಮಗ..!!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ. 01. ಪದವಿ ವಿದ್ಯಾಭ್ಯಾಸ ಮುಗಿಸಿ ಮನೆಯಲ್ಲಿದ್ದ ಮಗನಿಗೆ ಉದ್ಯೋಗ ಮಾಡು ಎಂದು ಸಲಹೆ ನೀಡಿದ ತಂದೆಗೆ ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹೊಡೆದ ಪರಿಣಾಮ ತಂದೆ ಗಾಯಗೊಂಡ ಘಟನೆ ಇಲ್ಲಿನ ಬಾಳ್ತಿಲ ಗ್ರಾಮದಲ್ಲಿ ನಡೆದಿದೆ.

ಗಾಯಗೊಂಡವರನ್ನು ವಿಶ್ವನಾಥ ಎಂದು ಗುರುತಿಸಲಾಗಿದೆ. ಇವರ ಮಗ ಹಾರ್ದಿಕ್ ಎಂಬಾತ ಪದವಿ ಮುಗಿಸಿ ಮನೆಯಲ್ಲಿಯೇ ಇದ್ದು, ಯಾವುದಾದರೂ ಉದ್ಯೋಗ ಮಾಡು ಎಂದು ತಂದೆ ಸಲಹೆ ನೀಡಿದ್ದರು. ಈ ವೇಳೆ ಏಕಾಏಕಿ ಮನೆಯಿಂದ ಹೊರಗೆ ಹೋಗಿ ದೊಣ್ಣೆ ತಂದು ತಂದೆಗೆ ಬೈದು ಎಡಕಾಲು ಹಾಗೂ ಎಡತೋಳಿಗೆ ಹೊಡೆದು ಗಾಯಗೊಳಿಸಿದ್ದಾನೆ. ಈ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ನೌಕಾನೆಲೆಗೆ ಸಂಬಂಧಿಸಿದ ಮಾಹಿತಿಗಳನ್ನು ಶತ್ರು ದೇಶಗಳಿಗೆ ರವಾನೆ ಮೂವರನ್ನು ವಶಕ್ಕೆ ಪಡೆದ ರಾಷ್ಟ್ರೀಯ ತನಿಖಾ ತಂಡ

error: Content is protected !!
Scroll to Top