(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 25. ಫ್ಲಿಪ್‌ಕಾರ್ಟ್ ನ ಕಸ್ಟಮರ್ ಕೇರ್ ನಂಬರ್ ಎಂದು ಭಾವಿಸಿದ ವ್ಯಕ್ತಿಯೊಬ್ಬರು ಯಾವುದೋ ನಂಬರ್‌ಗೆ ಕರೆ ಮಾಡಿ 48,354 ರೂ. ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ.
ನಗರದ ವ್ಯಕ್ತಿಯೊಬ್ಬರು ಫ್ಲಿಪ್‌ಕಾರ್ಟ್‌ನಲ್ಲಿ ‘ಕೀ ಬಂಚ್’ ಆರ್ಡರ್ ಮಾಡಿ 12 ದಿನ ಕಳೆದರೂ ಕೈಗೆ ತಲುಪದ ಹಿನ್ನಲೆ ಗೂಗಲ್‌ನಲ್ಲಿ ಫ್ಲಿಪ್‌ಕಾರ್ಟ್‌ನ ಕಸ್ಟಮರ್ ಕೇರ್ ನಂಬರ್ ಗಾಗಿ ಹುಡುಕಾಡಿದ್ದು, ಅಲ್ಲಿ ಸಿಕ್ಕಿದ ಯಾವುದೋ ನಂಬರ್ ಗೆ ಕರೆ ಮಾಡಿದ್ದರು. ಆಗ ಆ ಕಡೆಯಿಂದ ಕರೆ ಸ್ವೀಕರಿಸದಿದ್ದರೂ ಮತ್ತೆ ಅದೇ ನಂಬರಿನಿಂದ ವ್ಯಕ್ತಿಗೆ ವಾಪಸ್ ಕರೆ ಬಂದಿತ್ತು ಎನ್ನಲಾಗಿದೆ. ಹಿಂದಿಯಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿಯು ಆರ್ಡರ್ ಬರುವುದಿಲ್ಲ, ಹಣ ರಿಫಂಡ್ ಮಾಡಲು ‘ಎನಿ ಡೆಸ್ಕ್ ಆ್ಯಪ್’ ಡೌನ್‌ಲೋಡ್ ಮಾಡುವಂತೆ ತಿಳಿಸಿದ್ದಾನೆ. ಅದರಂತೆ ವ್ಯಕ್ತಿಯು ಆ್ಯಪ್ ಇನ್‌ಸ್ಟಾಲ್ ಮಾಡಿದ್ದು, ಬಳಿಕ ಆತನ ಸೂಚನೆಯಂತೆ ಫ್ಲಿಪ್ ಕಾರ್ಟ್ ಆ್ಯಪ್ ತೆರೆದು ಅದರಲ್ಲಿ ಡೆಬಿಟ್ ಕಾರ್ಡ್ ಮತ್ತು ಸಿವಿವಿ ನಂಬರ್ ನಮೂದಿಸಿದ್ದಾರೆ. ತಕ್ಷಣ ಅವರ ಖಾತೆಯಿಂದ 48,354 ರೂ. ಹಂತ ಹಂತವಾಗಿ ಕಡಿತಗೊಂಡಿದೆ ಹಣ ಕಳೆದುಕೊಂಡ ವ್ಯಕ್ತಿಯು ಮಂಗಳೂರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.