ಪೊಲೀಸ್ ಕಾನ್ಸ್‌ಟೇಬಲ್ ಸಹಿತ ನಾಲ್ವರಿಂದ ಗ್ಯಾಂಗ್ ರೇಪ್ ➤ ವಿಷ ಸೇವಿಸಿ ಯುವತಿ ಆತ್ಮಹತ್ಯೆ..!!

(ನ್ಯೂಸ್ ಕಡಬ) newskadaba.com ಹೈದರಾಬಾದ್, ಫೆ. 24. ಪೊಲೀಸ್ ಕಾನ್ಸ್ ಟೇಬಲ್ ಸೇರಿದಂತೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಯುವತಿಯೋರ್ವಳು ತನ್ನ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣ ರಾಜ್ಯದ ಮೆಹಬೂಬಬಾದ್ ಜಿಲ್ಲೆಯ ನೆಲ್ಲಿಕುಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 


ಫೆ.16ರಂದು ಯುವತಿಯು ತನ್ನ ಗೆಳೆಯನ ಮನೆಗೆ ತೆರಳಿದ್ದಾಗ ಅಲ್ಲಿ ಸಾಮೂಹಿಕ ಅತ್ಯಾಚಾರ ಕೃತ್ಯ ನಡೆದಿತ್ತು. ಬಳಿಕ ಮರುದಿನವೂ ಆಕೆಯನ್ನು ಬೇರೆ ಕೆಲವು ಯುವಕರು ಸೇರಿ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಫೆ.18ರಂದು ಬೆಳಗ್ಗೆ ಯುವತಿಯು ತನ್ನ ಮನೆಗೆ ಹಿಂತಿರುಗಿದ್ದು, ವಿಷ ಸೇವಿಸಿದ್ದಾಳೆ. ತಕ್ಷಣವೇ ಆಕೆಯ ಸೋದರ ಆಸ್ಪತ್ರೆಗೆ ಸೇರಿಸಿದ್ದನು. ಆದರೂ ಯುವತಿ ಮೃತಪಟ್ಟಿದ್ದು, ಅದಕ್ಕೂ ಮುನ್ನ ನಾಲ್ವರು ಕಾಮುಕರು ಸೇರಿ ಕೃತ್ಯ ನಡೆಸಿದ್ದಕ್ಕಾಗಿ ಬೇಸತ್ತು ವಿಷ ಸೇವಿಸಿದ್ದಾಗಿ ಹೇಳಿಕೆ ನೀಡಿದ್ದಳು.

Also Read  ರಾಜ್ಯದ 10 ವಿಜ್ಞಾನಿಗಳಿಗೆ ಯಂಗ್‌ ಸೈಂಟಿಸ್ಟ್‌ ಪ್ರಶಸ್ತಿ

error: Content is protected !!
Scroll to Top