Breaking News ಕಡಬ ಪರಿಸರದಲ್ಲಿ ಕಳ್ಳರ ಕೈಚಳಕ ➤ ಮರ್ಧಾಳದ ಎರಡು ಮನೆಗಳಿಗೆ ನುಗ್ಗಿ ಕಳ್ಳತನ..!

(ನ್ಯೂಸ್ ಕಡಬ) newskadaba.com ಕಡಬ, ಫೆ.22. ಕಳೆದ ಹಲವು ಸಮಯಗಳಿಂದ ಸೈಲೆಂಟ್ ಆಗಿದ್ದ ಕಳ್ಳರು ಇದೀಗ ಕಡಬ ಪರಿಸರದಲ್ಲಿ ತಮ್ಮ‌ಕೈಚಳಕವನ್ನು ಮೆರೆಯಲು ಆರಂಭಿಸಿದ್ದಾರೆ.

ಕಡಬ ಠಾಣಾ ವ್ಯಾಪ್ತಿಯ ಬಂಟ್ರ ಗ್ರಾಮದ ಚಾಕೋಟೆಕೆರೆ ನಿವಾಸಿ ಅಶ್ರಫ್ ಎಂಬವರ ಮನೆಯ ಹಿಂಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಮನೆಯಿಡೀ ಜಾಲಾಡಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದೇ ಇರುವುದನ್ನು ಅರಿತವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಈ ನಡುವೆ ಪಾಲೆತ್ತಡ್ಕ ನಿವಾಸಿ ಮರ್ಧಾಳದಲ್ಲಿ ಅಂಗಡಿ ಹೊಂದಿರುವ ಬಾಲಕೃಷ್ಣ ರೈ ಎಂಬವರ ಮನೆಗೂ ನುಗ್ಗಿರುವ ಕಳ್ಳರು ನಗದನ್ನು ದೋಚಿದ್ದಾರೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಮನೆಗೆ ಸೋಡಾ ಬಾಟಲಿ ಎಸೆತ, ಕಿಟಕಿ ಗಾಜಿಗೆ ಹಾನಿ ➤ ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

 

 

error: Content is protected !!
Scroll to Top