ಕೇಂದ್ರ ಸರಕಾರದ ನೋಟು ಅಮಾನೀಕರಣಕ್ಕೆ‌ ಖಂಡನೆ ► ಕಡಬ ಬ್ಲಾಕ್ ಕಾಂಗ್ರೆಸ್‌ನಿಂದ ಕರಾಳ‌ ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ನ.08. ಕಳೆದ 2016 ರ ನವೆಂಬರ್ 08 ರಂದು ಕೇಂದ್ರ ಸರಕಾರ ಹಳೆ ನೋಟು ಅಮಾನೀಕರಣಗೊಳಿಸಿರುವುದನ್ನು ಖಂಡಿಸಿ ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕರಾಳ ದಿನವನ್ನಾಗಿ ಆಚರಿಸಲಾಯಿತು.

ಕೇಂದ್ರ ಸರಕಾರದ ವಿರುದ್ಧ ಕಡಬ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ತಹಶಿಲ್ದಾರರ ಮೂಲಕ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ ಗೌಡ ಶಿರಾಡಿ, ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ, ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ತಾ.ಪಂ. ಸದಸ್ಯರಾದ ಫಝಲ್ ಕೋಡಿಂಬಾಳ, ಆಶಾ ಲಕ್ಷ್ಮಣ್, ಪ್ರಮುಖರಾದ ವಿಜಯ ಕುಮಾರ್ ರೈ, ಸೈಮನ್ ಸಿ.ಜೆ., ಉಷಾ ಅಂಚನ್, ನೀಲಾವತಿ ಶಿವರಾಂ, ಅಶ್ರಫ್ ಶೇಡಿಗುಂಡಿ, ಹಾಜಿ‌ ಹನೀಫ್ ಕೆ.ಎಂ., ಶರೀಫ್ ಎ.ಎಸ್, ಶಾಲಿನಿ‌ ಸತೀಶ್, ಸುಲೈಮಾನ್ ಪಿ, ಡೆನ್ನಿಸ್ ಫರ್ನಾಂಡೀಸ್, ಎಲ್ಸಿ ತೋಮಸ್, ಕ್ಸೇವಿಯರ್ ಬೇಬಿ ಮೊದಲಾದವರು ಉಪಸ್ಥಿತರಿದ್ದರು.

Also Read  ಜಪಾನೀಸ್ ಎನ್ಸೆಫಾಲಿಟಿಸ್ (ಜೆಇ) ಲಸಿಕಾ ಅಭಿಯಾನಕ್ಕೆ ಡಿಸಿ ಚಾಲನೆ ➤ 25ರವರೆಗೆ ನಡೆಯುವ ಅಭಿಯಾನದಲ್ಲಿ ಸಹಕರಿಸಲು ಕರೆ

error: Content is protected !!
Scroll to Top