ಅನ್ಯಕೋಮಿನ ಜೋಡಿ ರೆಸಾರ್ಟ್ ನಲ್ಲಿ ಪತ್ತೆ…! ➤ ಪೊಲೀಸ್ ವಶಕ್ಕೆ ನೀಡಿದ ಭಜರಂಗದಳ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ಮಲ್ಪೆ, ಫೆ. 17. ಅನ್ಯಕೋಮಿನ ಜೋಡಿಯೊಂದನ್ನು ಪತ್ತೆಹಚ್ಚಿದ ಭಜರಂಗದಳ ಕಾರ್ಯಕರ್ತರು ಜೋಡಿಯನ್ನು ಮಲ್ಪೆ ಪೊಲೀಸರಿಗೆ ಒಪ್ಪಿಸಿದ ಘಟನೆ ಬಡನಿಡಿಯೂರಿನ ರೆಸಾರ್ಟ್ ನಲ್ಲಿ ನಡೆದಿದೆ.

ಬ್ರಹ್ಮಾವರದ ಯುವತಿ ಹಾಗೂ ಹುಬ್ಬಳ್ಳಿಯ ಅನ್ಯಕೋಮಿನ ಯುವಕ ರೆಸಾರ್ಟ್ ಒಂದರಲ್ಲಿ ಕಳೆದ ರಾತ್ರಿ ಕೊಠಡಿ ಬುಕ್ ಮಾಡಿದ್ದರು. ಜೋಡಿ ಒಟ್ಟಾಗಿರುವುದನ್ನು ಕಂಡ ಸಂಘಟನಾ ಕಾರ್ಯಕರ್ತನೋರ್ವ ಸಂಘಟನೆಯ ಮುಖಂಡರಿಗೆ ತಿಳಿಸಿದ್ದು, ತಕ್ಷಣವೇ ನೂರಕ್ಕೂ ಹೆಚ್ಚು ಜನ ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು. ಬಳಿಕ ಮಲ್ಪೆ ಪೊಲೀಸರಿಗೆ ಜೋಡಿಯನ್ನು ಒಪ್ಪಿಸಿದ್ದಾರೆ ಎನ್ನಲಾಗಿದೆ.

Also Read  ರಾಮಕುಂಜ: ವ್ಯಕ್ತಿ ನಾಪತ್ತೆ

error: Content is protected !!
Scroll to Top