(ನ್ಯೂಸ್ ಕಡಬ)newskadaba.com ಮಂಗಳೂರು, ಫೆ. 17. ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಮಂಜನಾಡಿ ಉರುಮನೆ ಕ್ರಾಸ್ ಎಂಬಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ವರ್ಕಾಡಿ ಗ್ರಾಮದ ಮಹಮ್ಮದ್ ಹನೀಫ್, ತಲಪಾಡಿ ಸಮೀಪದ ಕೆಸಿ ರೋಡ್ ನ ಹಬೀಬ್ ಹಾಗೂ ಮಂಜೇಶ್ವರ ಗ್ರಾಮದ ಮಾಮದ್ ನಸೀಬ್ ಎಂದು ಗುರುತಿಸಲಾಗಿದೆ. ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ 13,400ರೂ. ಮೌಲ್ಯದ 1.340 ಗ್ರಾಂ ಗಾಂಜಾ ಹಾಗೂ ದ್ವಿಚಕ್ರವಾಹನ ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.