ಎರಡು ಕೋಟಿಗೂ ಅಧಿಕ ಬೆಲೆ ಬಾಳುವ ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನ..! ➤ ನಾಲ್ವರು ಅಂತರಾಜ್ಯ ಆರೋಪಿಗಳ ಬಂಧನ



(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 16. ಎರಡು ಕೋಟಿಗೂ ಅಧಿಕ ಮೌಲ್ಯದ ತಿಮಿಂಗಿಲ ವಾಂತಿಯನ್ನು ಮಾರಾಟ ಮಾಡಲೆತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಕಂಕನಾಡಿ ಪೋಲಿಸರು‌ ಬಂಧಿಸಿದ ಘಟನೆ ವರದಿಯಾಗಿದೆ.







ಬಂಧಿತ ಆರೋಪಿಗಳನ್ನು ಕೊಡಗಿನ ಕರಿಕೆ ಗ್ರಾಮದ ಜಾಬೀರ್ ಎಂ.ಎ ಮತ್ತು ಶಬಾದ್ ಎಲ್.ಕೆ, ಕೇರಳ ಮೂಲದ ಆಸೀರ್ ವಿ.ಪಿ ಹಾಗೂ ಶರೀಫ್ ಎಂದು‌ ಗುರುತಿಸಲಾಗಿದೆ. ಇವರು ಕಳೆದ 12ರಂದು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆಪ್ಪಿನಮೊಗರು ಎಂಬಲ್ಲಿ ಸುಮಾರು 2 ಕೋಟಿ 21 ಲಕ್ಷ ಮೌಲ್ಯದ ತಿಮಿಂಗಿಲದ ವಾಂತಿ ( ಅಂಬರ್ ಗ್ರೀಸ್ )ನ್ನು ಗಿರಾಕಿಗಳಿಗೆ ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಪೋಲಿಸರು 5 ಮೊಬೈಲ್, ಸ್ವಿಫ್ಟ್ ಕಾರು, 1070 ರೂ. ಹಣ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.






error: Content is protected !!
Scroll to Top