ಸುಳ್ಯ: ಬೇಕರಿಯಲ್ಲಿ ಅಡುಗೆ ಗ್ಯಾಸ್ ಲೀಕ್ ಆಗಿ ವ್ಯಕ್ತಿಗೆ ಗಾಯ..!

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 16. ವ್ಯಕ್ತಿಯೋರ್ವರು ಬೇಕರಿಯಲ್ಲಿ ಬ್ರೆಡ್ ಮಾಡುತ್ತಿದ್ದ ವೇಳೆ ಬೆಂಕಿ ತಾಗಿ ಗಾಯಗೊಂಡ ಘಟನೆ ಸುಳ್ಯದಲ್ಲಿ ನಡೆದಿದೆ.


ಗಾಯಗೊಂಡವರನ್ನು ಸುಳ್ಯ ತಾಲೂಕು ಮರಕಂಜ ಗ್ರಾಮದ ನಿವಾಸಿ ಮಂಜುನಾಥ ಎಂದು ಗುರುತಿಸಲಾಗಿದೆ. ಇವರು ಅರಂತೋಡಿನಲ್ಲಿರುವ ತಮ್ಮ ಅಣ್ಣನ ಬೇಕರಿಯಲ್ಲಿ ಬ್ರೆಡ್ ಮಾಡಲು ಓವೆನ್ ಬಿಸಿಯಾಗಲು ಗ್ಯಾಸ್ ನಲ್ಲಿಟ್ಟು ಬೆಂಕಿ ಹೊತ್ತಿಸಿದಾಗ ಅದರ ಒಳಗೆ ಗ್ಯಾಸ್ ತುಂಬಿದ್ದರಿಂದ ಒಮ್ಮೆಲೇ ಗ್ಯಾಸ್ ಹೊರಬಂದು ಮಂಜುನಾಥರ ಮುಖ ಮತ್ತು ಎದೆಭಾಗಕ್ಕೆ ಸುಟ್ಟ ಗಾಯಗಳಾಗಿವೆ. ಕೂಡಲೇ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ರೇಣುಕಸ್ವಾಮಿ ಕೊಲೆ ಪ್ರಕರಣ 17 ಮಂದಿ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ    

error: Content is protected !!
Scroll to Top