ಕಡಬ: ವಿಹಿಂಪ ವತಿಯಿಂದ ಮಂಡ್ಯ ಗೋಶಾಲೆಗೆ ಅಶಕ್ತ ಗೋವುಗಳ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಡಬ, ಫೆ. 15. ತಾಲೂಕಿನ ಕೊಂಬಾರು ಗ್ರಾಮದ ಕಾಪಾರು ನಿವಾಸಿ ಸೀತಪ್ಪ ಗೌಡ ಎಂಬವರ ಮನೆಯಲ್ಲಿದ್ದ 35 ದೇಶೀ ತಳಿಯ ಗೋವುಗಳನ್ನು ವಿಹಿಂಪ ಬಜರಂಗದಳ ಕಡಬ ಪ್ರಖಂಡ ನೇತೃತ್ವದಲ್ಲಿ ಮಂಡ್ಯ ರಾಮನಗರ ಜಿಲ್ಲೆಯ ಪುಣ್ಯಕೋಟಿ ಗೋಶಾಲೆಗೆ ಒಪ್ಪಿಸಲಾಯಿತು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಸೀತಪ್ಪ ಗೌಡರು ತನ್ನ ಮನೆಯಲ್ಲಿ 50 ಕ್ಕೂ ಹೆಚ್ಚು ದೇಶಿ ತಳಿಗಳನ್ನು ಸಾಕಿ ಸಲಹುತ್ತಿದ್ದರು. ತಮ್ಮ ಹಿರಿಯರು ಪಾಲನೆ ಮಾಡಿಕೊಂಡು ಬಂದಿರುವ ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಆದರೆ ಬದಲಾದ ಕಾಲಘಟ್ಟದಲ್ಲಿ ಕಾರಣಾಂತರಗಳಿಂದ ಗೋವುಗಳನ್ನು ಸಾಕುವ ಕಷ್ಟ ಕಾಲದಲ್ಲಿ ಸುಮಾರು 35 ಗೋವುಗಳನ್ನು ಗೋಶಾಲೆಗೆ ನೀಡುವ ನಿರ್ದಾರ ಮಾಡುವ ಒಳ್ಳೆಯ ಕಾರ್ಯವನ್ನು ಮಾಡಿದ್ದಾರೆ. ಗೋವುಗಳನ್ನು ದೇವರೆಂದು ಪೂಜಿಸುವ ಹಿಂದೂಗಳು ತಮ್ಮಲ್ಲಿರುವ ಅಶಕ್ತ ಗೋವುಗಳನ್ನು ಕಟುಕರ ಕೈ ನೀಡುವ ಬದಲು ಗೋಶಾಲೆಗೆ ನೀಡಿ ಜೀವನ ಸಾರ್ಥಕತೆ ಪಡಬೇಕು ಎಂದರು.

Also Read  ನಟಿ ರಶ್ಮಿಕಾ ಮಂದಣ್ಣ ಮನೆ ಮೇಲೆ ಐಟಿ ದಾಳಿ


ವಿಹಿಂಪ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಬಜರಂಗದಳ ಕಡಬ ಪ್ರಖಂಡ ಮಾಜಿ ಸಂಚಾಲಕ ವಾಸುದೇವ ಗೌಡ ಕೊಲ್ಲೆಸಾಗು, ವಿಹಿಂಪ ಮಾತೃಶಕ್ತಿ ಮುಖ್ಯಸ್ಥೆ ಗೀತಾ ಅಮೈ ಮೊದಲಾದವರು ಉಪಸ್ಥಿತರಿದ್ದರು. ಸೀತಪ್ಪ ಗೌಡರನ್ನು ಸ್ವಾಮಿಜಿ ಸನ್ಮಾನಿಸಿದರು. ಕಡಬದ ಪಶುವೈದ್ಯಾಧಿಕಾರಿ ಡಾ.ಅಜಿತ್ ಗೋವುಗಳನ್ನು ಪರೀಕ್ಷಿಸಿದರು. ಕಡಬ ಸರಸ್ವತಿ ವಿದ್ಯಾ ಸಂಸ್ಥೆಯ ವೆಂಕಟ್ರಮಣ ರಾವ್ ಮುಂಕುಡೆ ಸ್ವಾಗತಿಸಿ, ನಿರೂಪಿಸಿದರು.

error: Content is protected !!
Scroll to Top