ಸುಳ್ಯ: ರಸ್ತೆ ಮಧ್ಯೆ ಡೀಸೆಲ್ ಹರಿದು ಜಾರಿಬಿದ್ದ ದ್ವಿಚಕ್ರ ವಾಹನಗಳು ➤ ಸವಾರರಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 15. ರಸ್ತೆ ಮಧ್ಯೆ ಡೀಸೆಲ್ ಚೆಲ್ಲಿದ ಪರಿಣಾಮ ದ್ವಿಚಕ್ರ ವಾಹನ ಜಾರಿಬಿದ್ದು ಸವಾರರಿಬ್ಬರು ಜಖಂಗೊಂಡ ಘಟನೆ ಸುಳ್ಯದಲ್ಲಿ ನಡೆದಿದೆ.

 

ಯಾವುದೋ ವಾಹನದಲ್ಲಿ ಕೊಂಡೊಯ್ಯುತ್ತಿದ್ದ ಡೀಸೆಲ್ ರಸ್ತೆ ಮಧ್ಯೆ ಹರಿದಿದ್ದು, ಇದನ್ನು ತಿಳಿಯದೇ ಬಂದ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದು, ಸವಾರರು ಗಾಯಗೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿಗಳು ನೀರು ಹಾಯಿಸಿ ರಸ್ತೆಯನ್ನು ತೊಳೆದರು. ಬಳಿಕ ಡೀಸೆಲ್ ಅಂಶ ಕಡಿಮೆಯಾಗಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಯಿತು.

Also Read  ಬೆಳ್ತಂಗಡಿ: ತಡರಾತ್ರಿ ಹರೀಶ್ ಪೂಂಜಾ ಅವರ ಪರ ಹಣ ಹಂಚಿಕೆ ➤ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಾರ್ಯಕರ್ತರು

error: Content is protected !!
Scroll to Top