(ನ್ಯೂಸ್ ಕಡಬ) newskadaba.com ಕುಂದಾಪುರ, ಫೆ. 15. ಬಿ.ಬಿ. ಹೆಗ್ಡೆ ಪ್ರಥಮದರ್ಜೆ ಕಾಲೇಜು ಕುಂದಾಪುರದ OSS ಘಟಕದ ಆಶ್ರಯದಲ್ಲಿ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಹಾಗೂ ಇನ್ನರ್ ವೀಲ್ ಕ್ಲಬ್ ಕುಂದಾಪುರದ ಪ್ರಾಯೋಜಕತ್ವದಲ್ಲಿ ಮಾರಣ ಕಟ್ಟೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಉಡುಪಿಯ ನುರಿತ ವೈದ್ಯರುಗಳ ತಂಡದಿಂದ ಬ್ರಹತ್ ಆಯುರ್ವೇದ ತಪಾಸಣಾ ಶಿಭಿರ ಯಶಸ್ವಿಯಾಗಿ ನೆರವೇರಲ್ಪಟ್ಟಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸ್ಥಳೀಯ ಮುಖಂಡ ಶ್ರೀ ಮಂಜುನಾಥ ಶೆಟ್ಟಿ, ಹೆಗಡೆ ಗದ್ದೆ ಮನೆ ಇಡೂರು ಇವರು ದೀಪ ಬೆಳಗಿಸಿ ಉದ್ಘಾಟಿಸಿ ಶಿಬಿರಕ್ಕೆ ಶುಭಕೋರಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್ ಪೂಜಾರಿ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ “ಆಯುಷ್ಯದ ಬಗ್ಗೆ ಜನಮಾನಸಕ್ಕೆ ಸಂಪೂರ್ಣವಾಗಿ ಅರಿವು ಮೂಡಿಸುವುದೇ ಆಯುರ್ವೇದ”. ಆರೋಗ್ಯವನ್ನು ರಕ್ಷಣೆ ಮಾಡಿಕೊಂಡು ಬಂದಂತ ರೋಗಗಳಿಗೆ ವಿವಿಧ ರೀತಿಯ ಆಹಾರ-ವಿಹಾರ, ಆಚಾರ-ವಿಚಾರಗಳಿಂದ ಶರೀರ ಸಮತೋಲನ ಕಾಪಾಡಿಕೊಂಡು ಧರ್ಮ ಅರ್ಥ ಕಾಮ ಮೋಕ್ಷವನ್ನ ಗಳಿಸುವ ಬಗ್ಗೆ ವಿವರಿಸುತ್ತಾ ಪ್ರಸ್ತುತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಉಡುಪಿಯಲ್ಲಿ ಆಯುರ್ವೇದ ಅಧ್ಯಯನ ಮತ್ತು ಕಾಲೇಜಿನ ಸೌಲಭ್ಯಗಳಲ್ಲಿ ಶೇ. 50% ರಷ್ಟು ಆರೋಗ್ಯ ರಕ್ಷಣೆಯ ವಿಧಾನಗಳ ಬಗ್ಗೆ ಇನ್ನುಳಿದ 50% ರೋಗದ ಚಿಕಿತ್ಸೆಗೆ ಸಂಬಂಧಪಟ್ಟ ಸೌಲಭ್ಯಗಳ ಬಗ್ಗೆ ಜನರಿಗೆ ಉತ್ತಮ ಸೇವೆಯು ಲಭ್ಯವಿರುತ್ತದೆ ಎಂದು ಮಾಹಿತಿ ನೀಡಿದರು. ರೊಟರಿ ಕ್ಲಬ್ ಕುಂದಾಪುರ ದಕ್ಷಿಣದ ಅಧ್ಯಕ್ಷ ರೊ. ಮಹೇಂದ್ರಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದು ಕಾರ್ಯಕ್ರಮ ಯಶಸ್ಸಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಇನ್ನರ್ ವೀಲ್ ಅಧ್ಯಕ್ಷೆ ಏನ್ ಸೌಮ್ಯ ಶೆಟ್ಟಿ, ಕಾರ್ಯದರ್ಶಿ ಏನ್ ಶಾಂತಾ ಕಾಂಚನ್ ಹಾಗೂ ಬಿ.ಬಿ. ಹೆಗ್ಡೆ ಪ್ರಥಮದರ್ಜೆ ಕಾಲೇಜು ಕುಂದಾಪುರದ ಎನ್.ಎಸ್.ಎಸ್. ಘಟಕದ ಮುಖ್ಯಸ್ಥ ಶ್ರೀಮತಿ ರೇಶ್ಮಾ ಶೆಟ್ಟಿ ಉಪಸ್ತಿತರಿದ್ದರು. ರೊ.ಕೆ.ಪಿ. ಭಟ್, ರೊ. ರಮಾನಂದ ಕಾರಂತ್ ಉಪಸ್ಥಿತರಿದ್ದು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಶಿಬಿರದಲ್ಲಿ 234 ಕ್ಕೂ ಹೆಚ್ಚು ನಾಗರೀಕರು ಶಿಬಿರದ ಅನುಕೂಲವನ್ನು ಪಡೆದಿರುತ್ತಾರೆ ಹಾಗೂ ಸರ್ವರಿಗೂ ಉಚಿತವಾಗಿ ಔಷದಿಯನ್ನು ವಿತರಿಸಲಾಯಿತು. ಶಿಭಿರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ಡಾ| ನಾಗರಾಜ್, ಡಾ|ರಾಕೇಶ್, ಡಾ|ಅರುಣ್, ಡಾ|ಅರ್ಪಣ ಜೈನ್, ಡಾ|ಚಿತ್ರಲೇಖ ಹಾಗೂ ಇತರ ಕಿರಿಯ ಹಾಗೂ ಸ್ನಾತಕೋತ್ತರ ವೈದ್ಯರುಗಳು ತಂಡ ತಪಾಸಣೆ ಹಾಗೂ ಮಾಹಿತಿಗಳನ್ನು ನೀಡಿದರು.