ಪದವಿ ವಿದ್ಯಾರ್ಥಿಗಳು ಯಾವ ವಸ್ತ್ರ ಬೇಕಾದರೂ ಧರಿಸಿ ತರಗತಿಗೆ ಬರಬಹುದು ➤ ಪದವಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವಲ್ಲ- ಸಚಿವ ಅಶ್ವತ್ಥ ನಾರಾಯಣ

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಫೆ. 15. ಪದವಿ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಲ್ಲ ಹಾಗಾಗಿ ಪದವಿ ವಿದ್ಯಾರ್ಥಿಗಳು ಯಾವ ರೀತಿಯ ಬಟ್ಟೆ ಹಾಕಿಕೊಂಡು ಬರುವುದಕ್ಕೆ ಅವಕಾಶ ಇದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸ್ಪಷ್ಟನೆ ನೀಡಿದ್ದಾರೆ‌.

ಪದವಿ ಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಿರುವುದರಿಂದ ನಿಯಮಕ್ಕೆ ಅನುಸಾರವಾಗಿ ಬರಬೇಕು. ಹಿಜಾಬ್ ಗೆ ಅವಕಾಶವಿಲ್ಲ. ಹಿಜಾಬ್ ಕೇಸರಿ ಶಾಲು ವಿಚಾರದಲ್ಲಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದು, ಅದನ್ನು ಎಲ್ಲರೂ ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದರು. ಈಗಾಗಲೇ ಸಿಎಂ ಬೊಮ್ಮಾಯಿ ಅವರು ನಾಳೆಯಿಂದಲೇ ಕಾಲೇಜುಗಳು ಆರಂಭದ ಕುರಿತು ಸ್ಪಷ್ಟಪಡಿಸಿದ್ದು, ವಿದ್ಯಾರ್ಥಿಗಳು ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೇ ಸೌಹಾರ್ದೆತೆಯಿಂದ ಕಾಲೇಜುಗಳಿಗೆ ಹಾಜರಾಗಬೇಕು ಎಂದು ಮನವಿ ಮಾಡಿದ್ದಾರೆ.

Also Read  ಭಾರತೀಯ ಸೇನಾ ಗಡಿಭದ್ರತಾ ಪಡೆಗೆ ಕಾಣಿಯೂರಿನ ಯೋಗಿತಾ ಆಯ್ಕೆ

error: Content is protected !!
Scroll to Top