ಉಕ್ರೇನ್- ರಷ್ಯಾ ನಡುವಿನ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನ…! ➤ ಉಕ್ರೇನ್ ತೊರೆಯುವಂತೆ ಭಾರತೀಯರಿಗೆ ಸಂದೇಶ ರವಾನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 15. ಉಕ್ರೇನ್ ಹಾಗೂ ರಷ್ಯಾ ದೇಶಗಳ ನಡುವೆ ಯುದ್ಧದ ಭೀತಿ ತೀವ್ರಗೊಂಡ ಹಿನ್ನೆಲೆ ಉಕ್ರೇನ್ ತೊರೆಯುವಂತೆ ವಿವಿಧ ರಾಷ್ಟ್ರಗಳು ತಮ್ಮ ತಮ್ಮ ಪ್ರಜೆಗಳಿಗೆ ಸಂದೇಶ ರವಾನಿಸಿದ್ದು, ಹಾಗೆಯೇ ಉಕ್ರೇನ್ ನಲ್ಲಿರುವ ಭಾರತೀಯರು ಕೂಡಲೇ ಉಕ್ರೇನ್ ತೊರೆಯುವಂತೆ ಉಕ್ರೇನ್ ನಲ್ಲಿರುವ ಬಾರತದ ರಾಯಭಾರಿ ಕಛೇರಿ ಸಂದೇಶ ರವಾನಿಸಿದೆ.

ಉಕ್ರೇನ್‌ ದೇಶದ ವಿರುದ್ದ ರಷ್ಯಾದ ಆಕ್ರಮಣದಿಂದಾಗಿ ಉದ್ವಿಗ್ನತೆ ಹೆಚ್ಚುತ್ತಿದ್ದು, ರಷ್ಯಾ ದೇಶವು ಗಡಿಯಲ್ಲಿ ತನ್ನ ಸೈನಿಕರ ಸಂಖ್ಯೆಯನ್ನು ಮತ್ತು ಸೇನಾವಾಹನಗಳ ಸಂಖ್ಯೆಯನ್ನು ಏರಿಕೆ ಮಾಡಿದೆ‌. ಉಕ್ರೇನ್ ತೊರೆಯುವಂತೆ ಈಗಾಗಲೇ ತಮ್ಮ ಪ್ರಜೆಗಳಿಗೆ ಅಮೆರಿಕ, ಜರ್ಮನಿ, ಇಟಲಿ, ಬ್ರಿಟನ್, ಐರ್ಲೆಂಡ್, ಬೆಲ್ಜಿಯಂ, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ಕೆನಡಾ, ನಾರ್ವೆ, ಎಸ್ಟೋನಿಯಾ, ಲಿಥುವೇನಿಯಾ, ಬಲ್ಗೇರಿಯಾ, ಸ್ಲೊವೇನಿಯಾ, ಆಸ್ಟ್ರೇಲಿಯಾ, ಜಪಾನ್, ಇಸ್ರೇಲ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಗಳು ಸಂದೇಶ ರವಾನಿಸಿದೆ.

Also Read  ಮಾನವ ದೋಷವೇ ಪೋಖರಾ ವಿಮಾನ ದುರಂತಕ್ಕೆ ಕಾರಣ!

error: Content is protected !!
Scroll to Top