54 ಚೀನೀ ಆ್ಯಪ್ ಗಳನ್ನು ನಿಷೇಧಿಸಿದ ಕೇಂದ್ರ ಸರಕಾರ…!

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 15. ಭಾರತದ ಭದ್ರತೆಗೆ ಹೆಚ್ಚಿನ ಅಪಾಯವನ್ನುಂಟು ಮಾಡುವ ಚೀನಾದ 54 ಮೊಬೈಲ್ ಆ್ಯಪ್​​ಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 2020ರಲ್ಲಿ 118 ಮೊಬೈಲ್​ ಆ್ಯಪ್​​ಗಳ ಬಳಕೆಯನ್ನು ನಿಷೇಧಿಸಿದ್ದ ಸರ್ಕಾರ ಇದೀಗ ಮತ್ತೆ 54 ಆ್ಯಪ್​​ಗಳನ್ನು ನಿಷೇಧಿಸಲಿದೆ.

ಇವುಗಳ ಪೈಕಿ ಬ್ಯೂಟಿ ಕ್ಯಾಮರಾ, ಸ್ವೀಟ್​ ಸೆಲ್ಫೀ ಎಚ್​ಡಿ, ಬ್ಯೂಟಿ ಕ್ಯಾಮರಾ-ಸೆಲ್ಫಿ ಕ್ಯಾಮರಾ, ಈಕ್ವಲೈಝರ್ ಮತ್ತು ಬಾಸ್ ಬೂಸ್ಟರ್, ಕ್ಯಾಮ್ ಕಾರ್ಡ್ ಫಾರ್​ ಸೇಲ್ಸ್ ಫೋರ್ಸ್​ ಎಂಟ್​, ಐಸೊಲ್ಯಾಂಡ್ 2: ಆಶಸ್ ಆಫ್ ಟೈಮ್ ಲೈಟ್, ವಿವಾ ವಿಡಿಯೋ ಎಡಿಟರ್​, ಆ್ಯಪ್​ಲಾಕ್​, ಡ್ಯುಯೆಲ್​ ಸ್ಪೇಸ್​ ಲೈಟ್​, Tencent Xriver, Onmyoji Chess, Onmyoji Arena ಈ ಆ್ಯಪ್​ಗಳು ಸೇರಿದಂತೆ 54 ಚೀನಾದ ಮೊಬೈಲ್ ಆಪ್ ಗಳನ್ನು ಭಾರತದಲ್ಲಿ ನಿಷೇಧಿಸುವಂತೆ ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವಾಲಯವು ಆ್ಯಪ್​ ಸ್ಟೋರ್​ ಮತ್ತು ಪ್ಲೇ ಸ್ಟೋರ್​​ಗಳಿಗೆ ಸೂಚನೆ ನೀಡಿದೆ.

Also Read  ಕರೆನ್ಸಿ ಅಕ್ರಮ ವಹಿವಾಟು.! ➤20 ಸಂಸ್ಥೆಗಳ ವಿರುದ್ಧ ತನಿಖೆ ನಡೆಸಿದ ಕೇಂದ್ರ ಸರ್ಕಾರ.!!

error: Content is protected !!
Scroll to Top