ಜುಲೈ 01ರಿಂದ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ..!

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ. 15. ಜುಲೈ 01ರಿಂದ ಏಕಬಳಕೆಯ ಪ್ಲಾಸ್ಟಿಕ್ ನಿಷೇಧವಾಗಲಿದೆ. ಅದರ ಸಂಗ್ರಹಣೆ, ಉತ್ಪಾದನೆ, ವಿತರಣೆ ಮತ್ತು ಬಳಕೆಯಲ್ಲಿ ತೊಡಗಿರುವ ಎಲ್ಲರಿಗೂ ಕೇಂದ್ರ ಮಾಲಿನ್ಯ ಮಂಡಳಿ ಸೂಚನೆ ನೀಡಿದ್ದು, ಪ್ಲಾಸ್ಟಿಕ್ ಧ್ವಜಗಳಿಂದ ಹಿಡಿದು ಇಯರ್ ಬಡ್ ಗಳವರೆಗೆ, ಪ್ಲಾಸ್ಟಿಕ್ ಸ್ಪೂನ್, ಗ್ಲಾಸ್, ಫ್ಲ್ಯಾಗ್ ಹಾಗೂ ಬ್ಯಾನರ್ ಸೇರಿದಂತೆ ಏಕಬಳಕೆಯ ಪ್ಲಾಸ್ಟಿಕ್ ಗಳು ಪರಿಸರಕ್ಕೆ ಅತ್ಯಂತ ಹಾನಿ ಉಂಟು ಮಾಡುವುದರಿಂದ ಜೂನ್ 30ರ ಒಳಗೆ ಅವುಗಳ ಮೇಲಿನ ನಿಷೇಧಕ್ಕೆ ಸಿದ್ದತೆ ಪೂರ್ಣಗೊಳಿಸಲು ಸೂಚಿಸಲಾಗಿದೆ.


ಏಕಬಳಕೆಯ ಪ್ಲಾಸ್ಟಿಕ್ ನ್ನು ಸುಲಭವಾಗಿ ನಾಶಪಡಿಸಲಾಗುವುದಿಲ್ಲ ಅಥವಾ ಮರುಬಳಕೆ ಕೂಡಾ ಮಾಡಲಾಗುವುದಿಲ್ಲ. ಪ್ಲಾಸ್ಟಿಕ್ ನ್ಯಾನೋ ಕಣಗಳು ನೀರು ಮತ್ತು ಭೂಮಿಯನ್ನು ಕರಗಿಸಿ ಕಲುಷಿತಗೊಳಿಸುತ್ತವೆ ಇದರಿಂದ ಜಲಚರಗಳಿಗೂ ತುಂಬಾ ಹಾನಿಯುಂಟಾಗುತ್ತದೆ. ಜೂ. 30ರ ಒಳಗೆ ಪ್ಲಾಸ್ಟಿಕ್ ದಾಸ್ತಾನು ಮುಗಿಸುವಂತೆ ದಾಸ್ತಾನುದಾರರು, ಉತ್ಪಾದಕರು, ಇ-ಕಾಮರ್ಸ್ ಕಂಪನಿ, ಬೀದಿ ವ್ಯಾಪಾರಿಗಳು, ಮಾಲ್ ಗಳು, ಮಾರುಕಟ್ಟೆಗಳು, ಶಾಪಿಂಗ್ ಕೇಂದ್ರಗಳು, ಚಿತ್ರ ಮಂದಿರಗಳು, ಆಸ್ಪತ್ರೆ, ಶಾಲಾ-ಕಾಲೇಜು, ಕಛೇರಿ ಹಾಗೂ ಇತರ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಸೂಚನೆ ನೀಡಿದೆ. ಪ್ಲಾಸ್ಟಿಕ್ ನಿಷೇಧಕ್ಕೆ ಆಗಸ್ಟ್ 2021ರಲ್ಲಿ ಕೇಂದ್ರ ಪರಿಸರ ಸಚಿವರು ಅಧಿಸೂಚನೆಯನ್ನು ಹೊರಡಿಸಿದ್ದು, ನಷ್ಟದ ಹಿನ್ನೆಲೆ ಜುಲೈ 1ರಿಂದ ನಿಷೇಧಿಸುವಂತೆ ಕೋರಲಾಗಿತ್ತು. ಹಾಗಾಗಿ ಜೂ. 30ರೊಳಗೆ ಪ್ಲಾಸ್ಟಿಕ್ ನಿಷೇಧದ ಎಲ್ಲಾ ಸಿದ್ದತೆಗಳನ್ನು ಪೂರ್ಣಗೊಳಿಸಲು ತಿಳಿಸಲಾಗಿದೆ.

Also Read  ಈದ್- ಮೊಹರಂ ಸಂದರ್ಭದಲ್ಲಿ 2 ಗ್ಯಾಸ್ ಸಿಲಿಂಡರ್‌ ಉಚಿತ: ಅಮಿತ್ ಶಾ ಘೋಷಣೆ

error: Content is protected !!
Scroll to Top