ವಕೀಲ ಜಗದೀಶ್ ಗೆ ಮತ್ತೊಂದು ಶಾಕ್ ➤ ಇನ್ನುಂದೆ ಜಗದೀಶ್ ಕರ್ನಾಟಕದಲ್ಲಿ ವಕೀಲ ವೃತ್ತಿಯನ್ನೇ ಮಾಡುವಂತಿಲ್ಲ…!?

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 15. ಕೋರ್ಟ್ ಆವರಣದಲ್ಲಿ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ವಕೀಲ ಜಗದೀಶ್ ಅವರಿಗೆ ಈಗಾಗಲೇ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಇದರ ಬೆನ್ನಲ್ಲೇ ಜಗದೀಶ್ ಅವರಿಗೆ ಇನ್ನೊಂದು ಶಾಕ್ ಒಂದನ್ನು ಕರ್ನಾಟಕ ಬಾರ್ ಕೌನ್ಸಿಲ್ ನೀಡಿದೆ.

ಕರ್ನಾಟಕ ಬಾರ್ ಕೌನ್ಸಿಲ್ ಹೈಬ್ರೀಡ್ ಸಭೆಯಲ್ಲಿ ವಕೀಲ ಜಗದೀಶ್ ಅವರಿಗೆ ಸಂಬಂಧಿಸಿದ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಬಾರ್ ಕೌನ್ಸಿಲ್ ಸದಸ್ಯನ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ್ದಲ್ಲದೇ ಬಾರ್ ಕೌನ್ಸಿಲ್ ವಿರುದ್ಧ ಅನಗತ್ಯ ಸುಳ್ಳು ಪ್ರಚಾರ ಮಾಡಿದ್ದಾರೆಂದು ಬಾರ್ ಕೌನ್ಸಿಲ್ ಜಗದೀಶ್ ಅವರನ್ನು ಬ್ಯಾನ್ ಮಾಡಿದೆ. ಇದರಿಂದಾಗಿ ಕರ್ನಾಟಕದಲ್ಲಿ ಜಗದೀಶ್ ಇನ್ನು ಮುಂದೆ ವಕೀಲ ವೃತ್ತಿ ಮಾಡುವಂತಿಲ್ಲ ಎನ್ನುವುದು ತಿಳಿದು ಬಂದಿದೆ. ಜಗದೀಶ್ ಅವರು ಹಲವು ವಿಚಾರಕ್ಕೆ ಫೇಸ್ಬುಕ್ ಲೈವ್ ಬರುತ್ತಿದ್ದು, ಇತ್ತೀಚೆಗೆ ಮಾಡಿದ ಲೈವ್ ನಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ವಕೀಲರ ಸಂಘ ಮತ್ತು ಕೆಲವು ವಕೀಲರ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದರು.

Also Read  ತೊಕ್ಕೊಟ್ಟು ಬಳಿ ಕಾರು, ಬೈಕ್ ಅಪಘಾತ : ಬೈಕ್ ಸವಾರರು ಗಂಭೀರ

error: Content is protected !!
Scroll to Top