ಮದುವೆ ಮಾಡಿಸಿಲ್ಲವೆಂದು ತಂದೆಯನ್ನೇ ಹತ್ಯೆಗೈದ ಮಗ..!

(ನ್ಯೂಸ್ ಕಡಬ) newskadaba.com ರಾಯಚೂರು, ಫೆ. 11. ಮದುವೆ ಮಾಡಿಸಿಲ್ಲ ಎಂಬ ಕಾರಣಕ್ಕೆ ಮಗನೋರ್ವ ಸ್ವತಃ ತಂದೆಯನ್ನೇ ಹತ್ಯೆಗೈದ ಘಟನೆ ರಾಯಚೂರು ನಗರದ ಗೋಶಾಲೆ ಹಿಂಭಾಗದಲ್ಲಿ ನಡೆದಿದೆ.

ಹತ್ಯೆಯಾದವರನ್ನು ನಿವೃತ್ತ ಎಎಸ್ಐ ಬಸವರಾಜಪ್ಪ(75) ಹಾಗೂ ಆರೋಪಿಯನ್ನು ಜಗದೀಶ ಎಂದು ಗುರುತಿಸಲಾಗಿದೆ. ಬಸವರಾಜಪ್ಪ ಅವರಿಗೆ ಐದು ಜನ ಮಕ್ಕಳ ಪೈಕಿ ಮೂವರು ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು, ಗಂಡು ಮಕ್ಕಳಿಗೆ ಮದುವೆಯಾಗಿರಲಿಲ್ಲ. ಈ ಕಾರಣದಿಂದ ಕಿರಿಯ ಮಗ ಜಗದೀಶ್ ಮಾನಸಿಕ ಖಿನ್ನತೆಗೆ ಒಳಗಾಗಿ ಮದ್ಯ ವ್ಯಸನಿಯಾಗಿದ್ದ ಎನ್ನಲಾಗಿದೆ. ಎಂದಿನಂತೆ ಪಾನಮತ್ತನಾಗಿ ಅಮಲಿನಲ್ಲಿದ್ದ ಜಗದೀಶ್, ಮದುವೆ ಮಾಡಿಸಲಿಲ್ಲ ಎಂದು ತಂದೆ ಮೇಲೆ ಕೋಪಗೊಂಡು ತಂದೆಯನ್ನೇ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈ ಕುರಿತು ರಾಯಚೂರಿನ ಮಾರ್ಕೆಟ್ ಯಾರ್ಡ್ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ.

Also Read  ಬೆಳ್ತಂಗಡಿ: ಬಾಲಕ ಸೇರಿ ಇಬ್ಬರು ಫಲ್ಗುಣಿ ನದಿಯಲ್ಲಿ ಮುಳುಗಿ ಮೃತ್ಯು

error: Content is protected !!
Scroll to Top