(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 11. ನಗರ ಕಮಿಷನರೇಟ್ ವ್ಯಾಪ್ತಿಯ ಕ್ರಿಮಿನಲ್ ಪ್ರಕರಣದ ಹಿನ್ನೆಲೆಯುಳ್ಳ ಇಬ್ಬರು ಆರೋಪಿಗಳಾದ ರೋಹಿದಾಸ್ ಅಲಿಯಾಸ್ ಆಕಾಶ್ ಭವನ್ ಶರಣ್ ಹಾಗೂ ಮಹಮ್ಮದ್ ನವಾಝ್ ಯಾನೆ ಪಿಂಕಿ ಎಂಬವರನ್ನು ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಆಕಾಶ್ ಭವನ್ ಶರಣ್ ಮೇಲೆ 2008ರಿಂದ 2022ರ ವರೆಗೆ 20ಕ್ಕೂ ಹೆಚ್ಚಿನ ಫೋಕ್ಸೋ, ಸುಲಿಗೆ, ಕೊಲೆಯತ್ನ ಹಾಗೂ ದಲಿತ ನಿಂದನೆ ಹೀಗೆ ಹಲವು ಪ್ರಕರಣ ದಾಖಲಾಗಿದ್ದು, ಜೊತೆಗೆ 2 022ರಲ್ಲಿ ಕೊಲೆಯಾದ ಸುರೇಂದ್ರ ಬಂಟ್ವಾಳ್ ಕೊಲೆಯ ಪ್ರಕರಣದಲ್ಲೂ ಭಾಗಿಯಾಗಿದ್ದ ಎಂಬ ಮಾಹಿತಿ ತಿಳಿದುಬಂದಿದೆ. 2018ರಲ್ಲಿ ಕೊಲೆಯಾದ ದೀಪಕ್ ರಾವ್ ಪ್ರಕರಣದ ಆರೋಪಿ ಪಿಂಕಿ ನವಾಝ್ ಮೇಲೆ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ 12 ಪ್ರಕರಣ ಹಾಗೂ ಜಿಲ್ಲೆಯಲ್ಲಿ ಮೂರು ಪ್ರಕರಣ ಸೇರಿದಂತೆ ಒಟ್ಟು 15 ಪ್ರಕರಣಗಳು ದಾಖಲಾಗಿದೆ. ಆದ್ದರಿಂದ ಈತನ ಮೇಲೂ ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಆದೇಶ ವಿಧಿಸಲಾಗಿದೆ.