ಭುಗಿಲೆದ್ದ ಹಿಜಾಬ್- ಕೇಸರಿ ವಿವಾದ ➤ ಉಡುಪಿ ಎಂಜಿಎಂ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ಘೋಷಣೆ…!

(ನ್ಯೂಸ್ ಕಡಬ) newskadaba.com ಉಡುಪಿ, ಫೆ. 08. ನಗರದ ಎಂಜಿಎಂ ಕಾಲೇಜಿನಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ತಾರಕಕ್ಕೇರಿದ್ದು, ಮಂಗಳವಾರದಂದೂ ಕೂಡಾ ಬೆಳಗ್ಗೆ ಎರಡೂ ಗುಂಪಿನ ನಡುವೆ ವಿವಾದ ಹೆಚ್ಚಾದ ಹಿನ್ನೆಲೆ ಕಾಲೇಜು ಆಡಳಿತ ಮಂಡಳಿ ತುರ್ತು ಸಭೆ ನಡೆಸಿ, ಕಾಲೇಜಿಗೆ ಅನಿರ್ಧಿಷ್ಟಾವಧಿ ರಜೆ ಘೋಷಿಸಿದೆ.

ಸಭೆಯ ಬಳಿಕ ಎರಡೂ ಗುಂಪಿನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಪ್ರಾಂಶುಪಾಲ ದೇವದಾಸ್ ನಾಯಕ್, ” ಸದ್ಯಕ್ಕೆ ಕಾಲೇಜಿಗೆ ರಜೆ ಘೋಷಣೆ ನೀಡಲಾಗಿದ್ದು, ವಿಚಾರ ಕೋರ್ಟ್ ನಲ್ಲಿರುವ ಕಾರಣ ನ್ಯಾಯಾಲಯದ ತೀರ್ಪು ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಹೀಗಾಗಿ ಕಾಲೇಜು ಸೂಚನೆ ನೀಡುವವರೆಗೂ ವಿದ್ಯಾರ್ಥಿಗಳು ಕಾಲೇಜಿಗೆ ಬರಬಾರದು” ಎಂದರು.

Also Read  ಬಂಟ್ವಾಳ: ತಾಯಿಯನ್ನು ಶೌಚಗೃಹದಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿದ ಮಗ ಮತ್ತು ಸೊಸೆ...!! ➤ ದೂರು ದಾಖಲು

error: Content is protected !!
Scroll to Top