ಶ್ರೀಗಂಧದ ಮರ ಕಳ್ಳತನ ಪ್ರಕರಣ ➤ ಮೂವರು ಖಾಕಿ ಬಲೆಗೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 08. ಶ್ರೀಗಂಧದ ಮರ ಕಳ್ಳತನಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೆಳುವಾಯಿ ನಿವಾಸಿ ಸದ್ಯ ಕೆ.ಸಿ ನಗರದಲ್ಲಿ ವಾಸವಾಗಿರುವ ಮಜೀದ್ ಯಾನೆ ನವಾಝ್, ಬಂಟ್ವಾಳದ ಶರೀಫ್ ಯಾನೆ ದುನಿಯಾ ಶರೀಫ್ ಹಾಗೂ ವರ್ಕಾಡಿಯ ಲಕ್ಷ್ಮಣ ಶೆಟ್ಟಿ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು 25,000ರೂ. ಮೌಲ್ಯದ 41.1 ಕೆಜಿ ತೂಕದ 14 ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

Also Read  ಕಡಲ ತೀರದ ಸ್ವಚ್ಛತೆ ಪ್ರತಿಯೊಬ್ಬರ ಆದ್ಯ ಕರ್ತವ್ಯ- ಡಾ|| ಚೂಂತಾರು ಪಣಂಬೂರು ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನ

error: Content is protected !!
Scroll to Top