ಎಸ್ಐ ಸಹಿತ ನಾಲ್ವರು ಪೊಲೀಸರ ಮೇಲೆ ಯುವಕನಿಂದ ಹಲ್ಲೆ..! ➤ ಆರೋಪಿ ವಶಕ್ಕೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಫೆ. 08. ಪೊಲೀಸರ ಮೇಲೆ ಯುವಕನೋರ್ವ ಹಲ್ಲೆ ನಡೆಸಿದ ಪರಿಣಾಮ ನಾಲ್ವರು ಪೊಲೀಸರು ಗಾಯಗೊಂಡ ಘಟನೆ ನಗರದ ಹೊರವಲಯದ ಅಣಂಗೂರು ಎಂಬಲ್ಲಿ ನಡೆದಿದೆ.


ಗಾಯಗೊಂಡವರನ್ನು ನಗರ ಠಾಣಾ ಇನ್ಸ್‌ಪೆಕ್ಟರ್ ವಿಷ್ಣು ಪ್ರಸಾದ್, ಚಾಲಕ ಸಜಿತ್, ಸನೀಶ್ ಹಾಗೂ ಬಾಬು ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯನ್ನು ಆಲೂರು ನಿವಾಸಿ ಮುನೀರ್ ಎಂದು ಗುರುತಿಸಲಾಗಿದೆ. ಅಣಂಗೂರಿನ ಬಾರ್ ಒಂದರಲ್ಲಿ ದಾಂಧಲೆ ನಡೆಸುತ್ತಿರುವ ಮಾಹಿತಿಯನ್ನು ಖಚಿತಪಡಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯುವ ಸಂದರ್ಭ ಕಾರಿನ ಗಾಜನ್ನು ಹುಡಿಮಾಡಿ ವೈಪರ್ ನಿಂದ ಹಲ್ಲೆ ನಡೆಸಿದ್ದಾನೆ. ಗಾಯಾಳು ಪೊಲೀಸರು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆರೋಪಿ ಮುನೀರ್ ವಿರುದ್ದ ಕರ್ತವ್ಯಕ್ಕೆ ಅಡ್ಡಿ, ಪೊಲೀಸರ ಮೇಲೆ ಹಲ್ಲೆ ಮೊದಲಾದ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.

Also Read  ಸುರತ್ಕಲ್: ಫರ್ನಿಚರ್ ಮಳಿಗೆಯಲ್ಲಿ ಬೆಂಕಿ ಅವಘಡ ➤ ಅಪಾರ ನಷ್ಟ

error: Content is protected !!
Scroll to Top