ಬಂಟ್ವಾಳ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ- ಆರೋಪಿ ಅಂದರ್…!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ. 08. ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಕ್ಕೆ ಸಂಬಂಧಿಸಿ ಯುವಕನನ್ನು ಪೋಕ್ಸೋ ಕಾಯ್ದೆಯಡಿ ಬಂಟ್ವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಫರಂಗಿಪೇಟೆ ಕುಂಪನಮಜಲು ನಿವಾಸಿ ಮುಸ್ತಫಾ (32) ಎಂದು ಗುರುತಿಸಲಾಗಿದೆ. ಈತ ನೆರೆ ಮನೆಯ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಫರಂಗಿಪೇಟೆಯ ಅಂಚೆ ಕಚೇರಿ ಬಳಿ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಾಲಕಿಯ ಹೆತ್ತವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದರು. ಅದರಂತೆ ಆರೋಪಿಯನ್ನು‌ ಬಂಧಿಸಲಾಗಿದೆ.

Also Read  "ಝೀರೋ ಡ್ರಾಪ್ ಔಟ್" ಅಭಿಯಾನದ ಭಾಗವಾಗಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ವತಿಯಿಂದ ತಾಲೂಕು ಶಿಕ್ಷಣಾಧಿಕಾರಿಯ ಭೇಟಿ

error: Content is protected !!
Scroll to Top