ಮಂಗಳೂರು: ಮನೆಯಲ್ಲಿಯೇ ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ➤ 128 ಸಿಲಿಂಡರ್ ವಶ- ಆರೋಪಿ ಪರಾರಿ..!

(ನ್ಯೂಸ್ ಕಡಬ) newskadaba.com ಉಳ್ಳಾಲ, ಫೆ. 07. ಮನೆಯಲ್ಲಿ ಅಕ್ರಮವಾಗಿ ಸಿಲಿಂಡರ್‌ಗಳಿಗೆ ಗ್ಯಾಸ್ ತುಂಬಿಸುತ್ತಿದ್ದ ಪ್ರಕರಣವನ್ನು ಬಯಲಿಗೆಳೆದ ಉಳ್ಳಾಲ ಪೊಲೀಸ್ ಠಾಣಾ ಸಿಬ್ಬಂದಿಗಳು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು, 1,92,000 ಲಕ್ಷ ರೂ. ಮೌಲ್ಯದ ಗ್ಯಾಸ್ ತುಂಬಿಸಲು ಬಳಸುತ್ತಿದ್ದ ಪರಿಕರ ಸೇರಿದಂತೆ ವಿವಿಧ ಕಂಪನಿಗಳ 128 ಸಿಲಿಂಡರ್‌ಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ವರದಿಯಾಗಿದೆ.

ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆ ನಿವಾಸಿ ಫ್ರಾನ್ಸಿಸ್ ಎಂಬವರು ತಮ್ಮ ಮನೆಯ ಬಳಿ ನಿರ್ಮಿಸಿದ ತಗಡು ಶೀಟಿನ ಕೋಣೆಯಲ್ಲಿ ದೈನಂದಿನ ಬಳಕೆಯ ಸಿಲಿಂಡರ್ ನಿಂದ ಖಾಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಗೆ ಕೃತಕವಾಗಿ ತಾನೇ ರೆಗ್ಯುಲೇಟರ್ ಮೂಲಕ ಗ್ಯಾಸ್ ರಿಫಿಲ್ಲಿಂಗ್ ಮಾಡಿ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದು, ಈ ಕುರಿತು ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಹಾಗೂ ಉಳ್ಳಾಲ ವಲಯ ಆಹಾರ ನಿರೀಕ್ಷಕರ ತಂಡ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ. ದಾಳಿಯ ಸಂದರ್ಭ ಖಾಲಿ ಗ್ಯಾಸ್ ಸಿಲಿಂಡರ್ ನ್ನು ನೆಲದ ಮೇಲೆ ಇರಿಸಿ , ಅದರ ಮೇಲೆ ತುಂಬಿದ ಗ್ಯಾಸ್ ಸಿಲಿಂಡರ್ ನನ್ನು ಕವುಚಿ ಹಾಕಿ ಪೈಪ್ ಮುಖೇನ ಕೃತಕವಾಗಿ ತುಂಬಿಸುತ್ತಿರುವ ದೃಶ್ಯ ಕಂಡುಬಂದಿದ್ದು, ಆರೋಪಿ ಸ್ಥಳದಿಂದ ಪರಾರಿಯಾಗಿರುವುದು ತಿಳಿದುಬಂದಿದೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!

Join the Group

Join WhatsApp Group