(ನ್ಯೂಸ್ ಕಡಬ) newskadaba.com ಫೆ. 05. ಖ್ಯಾತ ಪ್ರವಚನಕಾರರು, ಆಧ್ಯಾತ್ಮಿಕ ಚಿಂತಕರು, ಸರ್ವಧರ್ಮ ಪ್ರಚಾರಕರು ಆದ ಪದ್ಮಶ್ರೀ ಇಬ್ರಾಹಿಂ ಸುತಾರ ಅವರು ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಇವರು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಬಡ ಕುಟುಂಬದಲ್ಲಿ 1940 ರ ಮೇ 10 ರಂದು ನಬಿ ಸಾಹೇಬ್ ಮತ್ತು ತಾಯಿ ಅಮೀನಾಬಿ ಅವರ ದಂಪತಿ ಪುತ್ರನಾಗಿ ಜನಿಸಿದರು. ಬಡತನದ ಕಾರಣದಿಂದ ಹೆಚ್ಚು ಓದಲಾಗದೆ ಮೂರನೇ ತರಗತಿಯವರೆಗೆ ಶಿಕ್ಷಣವನ್ನು ಮುಗಿಸಿದರೂ ಕೂಡಾ ಮದ್ರಸಾದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಅಧ್ಯಯನ ಮಾಡಿ, ಬಳಿಕ ಭಗವದ್ಗೀತೆಯನ್ನು ಅಧ್ಯಯನ ಮಾಡಿದರು. ಭಾವೈಕ್ಯತೆಯನ್ನು ಮಾನವ ಮನಸ್ಸುಗಳಿಗೆ ತಲುಪಿಸುವಂತಹ ಪುಣ್ಯ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡುತ್ತಿದ್ದರು. ಅವರನ್ನು ಆಧುನಿಕ ಸೂಫಿಸಂತ, ಕನ್ನಡದ ಕಬೀರ ಎಂದೇ ಕರೆಯಲಾಗುತ್ತಿತ್ತು.
1995 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, 2018 ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಇದು ಅವರ ಪ್ರಾಮಾಣಿಕವಾದ ದೇಶ ಸೇವೆಗೆ ಸರ್ಕಾರ ನೀಡಿದ ಗೌರವವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಿ, ಕುಟುಂಬ ವರ್ಗಕ್ಕೆ ಹಾಗೂ ಅವರ ಅನುಯಾಯಿಗಳಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ದಯಪಾಲಿಸಲಿ ಅವರ ನಿಧನಕ್ಕೆ ಖಿದ್ಮಾ ಫೌಂಡೇಶನ್ ಕರ್ನಾಟಕದ ಎಲ್ಲಾ ರೀತಿಯ ಸಂತಾಪನ್ನು ಸೂಚಿಸುತ್ತಿದ್ದೀವೆ.