ರಸ್ತೆ ಬದಿಯಲ್ಲಿ ಮಗುವಿಗೆ ಹಾಲುಣಿಸುತ್ತಿದ್ದ ಬಲೂನ್ ಮಾರಾಟಗಾರ್ತಿ ಮೇಲೆ ಹರಿದ ಕಾರು ➤ ಮಹಿಳೆ ಮೃತ್ಯು…!

(ನ್ಯೂಸ್ ಕಡಬ) newskadaba.com ಮುಂಬೈ, ಫೆ 03. ತಾಯಿಯೋರ್ವಳು ಮಗುವಿಗೆ ಹಾಲುಣಿಸುತ್ತಿದ್ದ ವೇಳೆ, ವೇಗವಾಗಿ ಬಂದ ಕಾರೊಂದು ಆಕೆಯ ಮೇಲೆಯೇ ಹರಿದ ಪರಿಣಾಮ ರಸ್ತೆ ಬದಿಯಲ್ಲಿ ಬಲೂನ್ ಮಾರಾಟ ಮಾಡುತ್ತಿದ್ದ ಮಹಿಳೆ ಮೃತಪಟ್ಟ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ.


ಬೋರಿವ್ಲಿ ವೆಸ್ಟ್‌ನ ಕೋರಾ ಸಿಗ್ನಲ್‌ನಲ್ಲಿ ಬಲೂನ್ ಮಾರಾಟಗಾರ್ತಿ ತನ್ನ ಐದು ತಿಂಗಳ ಮಗುವಿಗೆ ಹಾಲುಣಿಸುತ್ತಿದ್ದ ವೇಳೆ ಆಕೆಯೆ ಮೇಲೆ ಕಾರು ಹರಿದಿದ್ದು, ಪರಿಣಾಮ ಗಂಭೀರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 5 ತಿಂಗಳ ಮಗು ರಿವಾನ್ಶ್ ಪ್ರಾಣಾಪಾಯವಿಲ್ಲದೆ ಪಾರಾಗಿದೆ.

Also Read  ಅಸಭ್ಯ ವರ್ತನೆ ➤ ಆಟೋ ರಿಕ್ಷಾದಲ್ಲಿದ್ದ ವ್ಯಕ್ತಿಯನ್ನು ಹೊರೆಗೆಳೆದು ಹಿಗ್ಗಾಮುಗ್ಗ ಥಳಿಸಿದ ಮಹಿಳೆ..!

error: Content is protected !!
Scroll to Top