ಉಪ್ಪಿನಂಗಡಿ: ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಲಾರಿ ಪಲ್ಟಿ..! ➤ ಚಾಲಕ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಫೆ. 03. ಅತಿ ವೇಗದಿಂದ ಬರುತ್ತಿದ್ದ ಟ್ರಕ್ ತನ್ನ ಲಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಮಗುಚಿಬಿದ್ದ ಘಟನೆ ಕರ್ವೇಲ್ ಅಲಂಗೂರು ಎಂಬಲ್ಲಿ ನಡೆದಿದೆ.

ಛತ್ತೀಸ್ಗಢ ದಿಂದ ಉಪ್ಪಿನಂಗಡಿಯ ಬೀಡಿ ಫ್ಯಾಕ್ಟರಿಯೊಂದಕ್ಕೆ ಲಾರಿಯಲ್ಲಿ ಬೀಡಿ ಎಲೆಗಳನ್ನು ಸಾಗಿಸುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಅತೀ ವೇಗವಾಗ ಬಂದ ಟ್ರಕ್ ಲಾರಿಗೆ ಢಿಕ್ಕಿಯಾಗುವ ಸಂಭವವಿದ್ದು, ಇದನ್ನರಿತ ಲಾರಿ ಚಾಲಕ ಲಾರಿಯನ್ನು ರಸ್ತೆಯ ಬದಿಗೆ ಇಳಿಸಿದ್ದು, ಈ ಸಂದರ್ಭ ಲಾರಿ ಮಗುಚಿಬಿದ್ದಿದೆ. ಘಟನೆಯಿಂದ ಯಾವುದೇ ಪ್ರಾಣಾಪಾಯವಾಗದೇ ಲಾರಿ ಚಾಲಕ ಹಾಗೂ ಕ್ಲೀನರ್ ಪಾರಾಗಿದ್ದಾರೆ.

Also Read  ಕಡಬ: ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಸೂಕ್ತ ಕ್ರಮಕ್ಕೆ ಆಗ್ರಹ ➤ ತಾಲೂಕು ಪತ್ರಕರ್ತರ ಸಂಘದಿಂದ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ

error: Content is protected !!
Scroll to Top