(ನ್ಯೂಸ್ ಕಡಬ) newskadaba.com ಉಜ್ಜೈಕಿಸ್ತಾನ್, ಫೆ. 03. ತಾಯಿಯೊಬ್ಬಳು ತನ್ನ 3 ವರ್ಷದ ಮಗುವನ್ನು ಕರಡಿಯ ಬೋನಿನೊಳಗೆ ಎಸೆದ ಘಟನೆ ಉಜ್ಜೈಕಿಸ್ತಾನದ ಮೃಗಾಲಯವೊಂದರಲ್ಲಿ ನಡೆದಿದ್ದು, ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೃಗಾಲಯದ ಸುತ್ತಲೂ ಜನರು ನೆರೆದಿರುವ ಸಂದರ್ಭದಲ್ಲೇ ಮಹಿಳೆಯೋರ್ವರು ತನ್ನ ಮಗುವನ್ನು ಕರಡಿಯ ಬೋನಿನೊಳಗೆ ಎಸೆದಿದ್ದಾಳೆ. ಮಗುವನ್ನು ಎಸೆಯುತ್ತಿದ್ದಂತೆಯೇ ಬೋನಿನಲ್ಲಿದ್ದ ಕರಡಿಯು ಮಗುವಿನ ಬಳಿಗೆ ಓಡಿ ಹೋಗಿದ್ದು, ಅಷ್ಟರಲ್ಲೇ ಎಚ್ಚೆತ್ತ ಮೃಗಾಲಯದ ಸಿಬ್ಬಂದಿ ಓಡಿ ಹೋಗಿ ಮಗುವನ್ನು ರಕ್ಷಿಸಿದ್ದಾರೆ. ಆದರೆ 16 ಅಡಿ ಎತ್ತರದಿಂದ ಬಿದ್ದ ಪರಿಣಾಮ ಮಗುವಿಗೆ ಗಂಭೀರ ಗಾಯಗಳಾಗಿದ್ದು, ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಮಗುವಿನ ತಾಯಿಯನ್ನು ಬಂಧಿಸಲಾಗಿದ್ದು, ಪ್ರಕರಣ ಸಾಬೀತಾದರೆ ಆಕೆಗೆ 15 ವರ್ಷ ಜೈಲು ಶಿಕ್ಷೆಯಾಗಲಿದೆ.