ಕಡಬ: ‘ಶೂ ಗಾರ್ಡನ್’ ಬ್ಯಾಗ್ & ಫೂಟ್ ವೇರ್ ಮಳಿಗೆ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಫೆ.02. ಇಲ್ಲಿನ ಫೆಡರಲ್ ಬ್ಯಾಂಕ್ ಮುಂಭಾಗದ ವೈಭವ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿದ್ದ ಫೂಟ್ ವೇರ್ ಮತ್ತು ಬ್ಯಾಗ್ ಮಾರಾಟ‌ ಸಂಸ್ಥೆ ‘ಶೂ ಗಾರ್ಡನ್’ ನೂತನ ಆಡಳಿತದೊಂದಿಗೆ ನವೀಕೃತಗೊಂಡು ಶುಭಾರಂಭಗೊಂಡಿತು.

ನೂತನ ಸಂಸ್ಥೆಯನ್ನು ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ಹಾಗೂ ಅಸ್ಸಯ್ಯದ್ ಶಾಹುಲ್ ಹಮೀದ್ ತಂಙಳ್ ಮರ್ಧಾಳ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕಡಬ ಟೌನ್ ಜುಮಾ ಮಸೀದಿಯ ಖತೀಬರಾದ ಅಲ್ ಹಾಜ್ ಇಬ್ರಾಹಿಂ ದಾರಿಮಿ, ಮರ್ಧಾಳ ಜುಮಾ ಮಸೀದಿಯ ಖತೀಬರಾದ ಅಬ್ದುಸ್ಸಲಾಂ ಮದನಿ, ಕಡಬ ಕೇಂದ್ರ ಜುಮಾ ಮಸೀದಿಯ ಖತೀಬರಾದ ಉಸ್ಮಾನ್ ಜೌಹರಿ ನೆಲ್ಯಾಡಿ, ಕಟ್ಟಡ ಮಾಲಕರಾದ ಅರುಣ್ ಕುಮಾರ್ ಭಾಗವಹಿಸಿದ್ದರು.

Also Read  ಗಂಡ-ಹೆಂಡತಿಯ ನಡುವೆ ಕಲಹ ಉಂಟಾಗುತ್ತಿದ್ದರೆ ತಪ್ಪದೇ ಈ ನಿಯಮ ಪಾಲಿಸಿ

error: Content is protected !!
Scroll to Top