ಯೂಟ್ಯೂಬ್ ನಲ್ಲಿ ಬಂಟ್ವಾಳದ ಯುವತಿಯ ಫೋಟೋ ದುರ್ಬಳಕೆ…! ➤ ದಂಪತಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ. 02. ಬಂಟ್ವಾಳದ ಯುವತಿಯೋರ್ವಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ದುರ್ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿ ದಂಪತಿಗಳಿಬ್ಬರನ್ನು ಬಂಧಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.


ಬಂಧಿತರನ್ನು ಶಿವಮೊಗ್ಗ ಮೂಲದ ಹರೀಶ್ ಮತ್ತು ಅನುಷಾ ಎಂದು ಗುರುತಿಸಲಾಗಿದೆ. ಆರೋಪಿಗಳಿಬ್ಬರು ಸಾಫ್ಟ್ ವೇರ್ ಇಂಜಿನಿಯರ್ ಗಳಾಗಿದ್ದು, ಕನ್ನಡ ಲೈಟ್ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ವೀಕ್ಷಕರ ಗಮನಸೆಳೆಯುವ ವಿಡಿಯೋವನ್ನು ಅಪ್ಲೋಡ್ ಮಾಡುತ್ತಿದ್ದರು. ಅಲ್ಲದೇ ವಿಡಿಯೋಗಳಿಗಾಗಿ ಹಲವು ಫೋಟೋಗಳನ್ನು ಬಳಸುತ್ತಿದ್ದ ಇವರು ಬಂಟ್ವಾಳದ ಯುವತಿಯೋರ್ವಳ ಫೋಟೋವನ್ನು ಜ್ಯೋತಿಷ್ಯದ ವಿಚಾರಕ್ಕೆ ಸಂಬಂಧಿಸಿ ದುರ್ಬಳಕೆ ಮಾಡಿರುವುದಾಗಿ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ತನಿಖೆ ನಡೆಸಿದ ಬಂಟ್ವಾಳ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Also Read  'ಕಬ್ಬನ್‌ ಪಾರ್ಕ್‌'ನಲ್ಲಿ ಹೊಸ ರೂಲ್ಸ್‌ ಜಾರಿ..!   ➤ ಪಾರ್ಕ್‌ನಲ್ಲಿ ಪ್ರೇಮಿಗಳು ಅಸಭ್ಯವಾಗಿ ವರ್ತಿಸಿದ್ರೆ 'ಲಾಠಿ ಚಾರ್ಜ್‌ ಫಿಕ್ಸ್'!  

error: Content is protected !!
Scroll to Top