ಮಂಗಳೂರು: ಕಾಲೇಜು ಆವರಣಕ್ಕೆ ತಲವಾರು ಹಿಡಿದು ಬಂದ ಯುವಕರು…!

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 02. ಪುಂಡರ ತಂಡವೊಂದು ನಗರದ ಶ್ರೀದೇವಿ ಕಾಲೇಜು ಆವರಣಕ್ಕೆ ತಲವಾರು ಹಿಡಿದು ಒಳನುಗ್ಗಿದ ಘಟನೆ ಬಳ್ಳಾಲ್ ಬಾಗ್ ನಲ್ಲಿ ನಡೆದಿದೆ.

ಹುಡುಗರ ಗುಂಪೊಂದು ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ಸ್ಕೂಟರಿನಲ್ಲಿ ಬಂದಿದ್ದು, ಈ ಸಂದರ್ಭ ಸ್ಕೂಟರ್ ಕೇರಳ ಮೂಲದ ವಿದ್ಯಾರ್ಥಿಗಳಿಗೆ ತಾಗಿತ್ತು ಇದರಿಂದಾಗ ಇತ್ತಂಡದ ನಡುವೆ ಮಾತಿನ ಚಕಮಕಿ ನಡೆದಿದೆ. ಇದನ್ನೇ ನೆಪ ಮಾಡಿಕೊಂಡ ಯುವಕರ ಗುಂಪು ಸ್ವಲ್ಪ ಹೊತ್ತಿನ ಬಳಿಕ ಕಾಲೇಜು ಆವರಣಕ್ಕೆ ತಲವಾರು ಹಿಡಿದುಕೊಂಡು ಬಂದು, ವಿದ್ಯಾರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದು, ವಿದ್ಯಾರ್ಥಿಗಳು ಸಿಗಲಿಲ್ಲ ಎನ್ನಲಾಗಿದೆ. ಕಾಲೇಜು ಆವರಣದಲ್ಲಿ ತಲವಾರು ಹಿಡಿದು ಯುವಕರ ವಿಡಿಯೋವನ್ನು ಇತರ ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ಕುರಿತು ಬರ್ಕೆ ಠಾಣೆಯಲ್ಲಿ ದೂರು ನೀಡಿದ್ದು, ತಲವಾರು ಹಿಡಿದು ಬಂದವರ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

Also Read  ಇಂದು ರಾಜ್ಯದಲ್ಲಿ 12 ಮಂದಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 705ಕ್ಕೆ ಏರಿಕೆ

error: Content is protected !!
Scroll to Top