ಬೆಂಗಳೂರಿನಲ್ಲಿ ರಸ್ತೆ ಅಪಘಾತ ➤ ಕಡಬದ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜ.31. ಬೈಕ್ ಹಾಗೂ ಲಾರಿ ಅಪಘಾತದಲ್ಲಿ ಕಡಬ ತಾಲೂಕಿನ ಆಲಂಕಾರಿನ ಯುವಕನೋರ್ವ ಮೃತಪಟ್ಟು, ಸಹ ಸವಾರ ಗಾಯಗೊಂಡ ಘಟನೆ ಸೋಮವಾರದಂದು ಬೆಂಗಳೂರಿನಲ್ಲಿ ನಡೆದಿದೆ.

ಮೃತ ಯುವಕನನ್ನು ಆಲಂಕಾರು ಗ್ರಾಮದ ಶರವೂರು ನಿವಾಸಿ ರಾಜೀವಿ ಎಂಬವರ ಪುತ್ರ ನಂದೀಪ್ (21) ಎಂದು ತಿಳಿದು ಬಂದಿದೆ. ಬೆಂಗಳೂರಿನ ಜಿಗನಿಯಲ್ಲಿ ಕಂಪೆನಿಯೊಂದರಲ್ಲಿ ಉದ್ಯೋಗ ದಲ್ಲಿದ್ದ ನಂದೀಪ್, ಬೆಳಿಗ್ಗೆ ಕೆಲಸಕ್ಕೆಂದು ಹಳೆನೇರಂಕಿಯ ತನ್ನ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದರು ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಅಟೋ ರಿಕ್ಷವೊಂದು ಹಠತ್ತಾಗಿ ಬಲಕ್ಕೆ ತಿರುಗಿದಾಗ ಅದಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಲಾರಿಯು ಯುವಕನ ತಲೆಯ ಮೇಲೆ ಸಂಚರಿಸಿದ ಪರಿಣಾಮ ನಂದೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ನಂದಿಪ್ ಅವರು ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

Also Read  ಬೈಕಂಪಾಡಿ: ಸ್ಪ್ರಿಂಗ್ ಉತ್ಪಾದನಾ ಕೇಂದ್ರದಲ್ಲಿ ಬೆಂಕಿ ಅನಾಹುತ

 

 

 

error: Content is protected !!
Scroll to Top