ಶ್ರೀ ರಾಮಕುಂಜೇಶ್ವರ ಪ.ಪೂ. ಕಾಲೇಜು: ಇತ್ತೀಚೆಗೆ ಪಿಎಸ್ಐ ರ್ಯಾಂಕ್ ಪಡೆದ ಬದ್ರುನ್ನಿಸಾ ಅವರಿಂದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ರಾಮಕುಂಜ, ಜ. 31. ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಬದರುನಿಸಾ ಅವರಿಂದ ಪ್ರೇರಣಾ ಕಾರ್ಯಕ್ರಮವು ನಡೆಯಿತು.

ಅವರು ತಮ್ಮ ಭಾಷಣದಲ್ಲಿ, “ವಿದ್ಯಾರ್ಥಿಗಳು ಶ್ರಮ ಪಡುವ ಸಮಯದಲ್ಲಿ ಶ್ರಮ ಪಟ್ಟು ಕಲಿತರೆ, ಖಂಡಿತವಾಗಿಯೂ ಉನ್ನತ ಹುದ್ದೆಗಳಿಗೆ ಏರಬಹುದು. ಕಾಲೇಜಿನಲ್ಲಿ ಗುರುಗಳ ಮಾರ್ಗದರ್ಶನವನ್ನು ಪಡೆದು, ಒಳ್ಳೆಯ ಅಂಕಗಳನ್ನು ಗಳಿಸಿ, ಕೌಶಲಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ನೀವೆಲ್ಲರೂ ಉತ್ತಮವಾದ ಉದ್ಯೋಗವನ್ನು ಪಡೆಯುವಲ್ಲಿ ಸಫಲರಾಗುತ್ತೀರಿ. ನಿಮ್ಮೆಲರ ಚಿಂತನೆ ಈ ಪ್ರಕಾರವಾಗಿರಲಿ” ಎಂದು ಸಂದೇಶವನ್ನು ಕೊಟ್ಟರು. ಕಾಲೇಜಿನ ಹಿರಿಯ ವಿದಾರ್ಥಿನಿಯಾದ ಬದರುನಿಸಾರವರು ಇತ್ತೀಚಿಗೆ ನಡೆದ ಪೊಲೀಸ್ ಇಲಾಖೆಯ ಪಿ.ಎಸ್.ಐ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. ಈ ವೇಳೆಯಲ್ಲಿ ಬದರುನಿಸಾ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ ಕೆ ಇವರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿನಾಯಕ ಪ್ರಜ್ವಲ್ ಕುಮಾರ್ ಸ್ವಾಗತಿಸಿ ವಂದಿಸಿದರು.

Also Read  ವಿದ್ಯುತ್ ಸ್ಪರ್ಶದಿಂದ ಕಾಡಾನೆ ಮೃತ್ಯು ..!   ➤  ರೈತನ ವಿರುದ್ಧ ಪ್ರಕರಣ ದಾಖಲು

error: Content is protected !!
Scroll to Top