ಕಣ್ಣೂರಿನಲ್ಲಿ ಬಾಂಬ್ ಸ್ಫೋಟ ➤ ಆರೆಸ್ಸೆಸ್ ಕಾರ್ಯಕರ್ತನಿಗೆ ಗಾಯ..!

(ನ್ಯೂಸ್ ಕಡಬ) newskadaba.com ಕಣ್ಣೂರು, ಜ. 31. ಬಾಂಬ್ ಸ್ಫೋಟಗೊಂಡ ಪರಿಣಾಮ ಆರೆಸ್ಸೆಸ್ ಕಾರ್ಯಕರ್ತನೋರ್ವ ಗಾಯಗೊಂಡ ಘಟನೆ ಕಣ್ಣೂರಿನಲ್ಲಿ ನಡೆದಿದೆ.


ಗಾಯಗೊಂಡವರನ್ನು ಸಿಪಿಐಎಂ ಕಾರ್ಯಕರ್ತ ಧನರಾಜ್ ಹತ್ಯೆ ಪ್ರಕರಣದ ಆರೋಪಿ ಬಿಜು ಎಂದು ಗುರುತಿಸಲಾಗಿದೆ. ಇವರು ಬಾಂಬ್ ಸ್ಫೋಟದ ಪರಿಣಾಮ ತನ್ನ ಎರಡು ಬೆರಳುಗಳನ್ನು ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಗಾಯಾಳು ಬಿಜು ಮನೆಯ ಸಮೀಪವೇ ಸ್ಫೋಟ ಸಂಭವಿಸಿದ್ದು, ಬಾಂಬ್ ತಯಾರಿಕೆಯ ವೇಳೆ ಸ್ಫೋಟವಾಗಿದೆಯೋ ಅಥವಾ ಬೇರೆ ಕಾರಣದಿಂದ ಸ್ಪೋಟವಾಗಿದೆಯೇ ಎಂಬುದು ತನಿಖೆಯ ಬಳಿಕವೇ ತಿಳಿದುಬರಬೇಕಿದೆ. ಸದ್ಯ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದು, ಘಟನೆಯ ಕುರಿತು ಸ್ಫೋಟಕ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Also Read  ಕೇರಳದ ಒಂದೇ ಕುಟುಂಬದ ಐವರಿಗೆ ಕೊರೋನ ವೈರಸ್ ಪತ್ತೆ

error: Content is protected !!
Scroll to Top