ಕೊರೋನಾ ನಿಯಮಗಳಿಂದ ಸ್ಥಗಿತವಾಗಿದ್ದ ಕಂಬಳ ಕೂಟದ ಪರಿಷ್ಕೃತ ವೇಳಾಪಟ್ಟಿ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 31. ಕೊರೋನಾ ಹಿನ್ನೆಲೆಯಿಂದಾಗಿ ಕೆಲಕಾಲ ಸ್ಥಗಿತವಾಗಿದ್ದ ಕರಾವಳಿಯ ಜನಪದ ಕ್ರೀಡೆ ಕಂಬಳಕ್ಕೆ ಕೋವಿಡ್ ನಿಯಮ ಸಡಿಲಿಕೆಯಾದ ಕಾರಣ ಮತ್ತೆ ಚಾಲನೆ ಸಿಕ್ಕಿದ್ದು, ಇದೀಗ ಕಂಬಳ ನಡೆಸಲು ಜಿಲ್ಲಾ ಕಂಬಳ ಸಮಿತಿ ಮುಂದಾಗಿದೆ.

ಈ ಕುರಿತು ಸಭೆ ನಡೆಸಿದ ಜಿಲ್ಲಾ ಸಮಿತಿ ಸದಸ್ಯರು, ಕಂಬಳ ವ್ಯವಸ್ಥಾಪಕರು ಸೇರಿ ಹೊಸ ದಿನಾಂಕವನ್ನು ಪ್ರಕಟ ಮಾಡಿದ್ದು, ಫೆ. 05ರಿಂದ ಬಾರಾಡಿ ಬೀಡು ಕಂಬಳಕ್ಕೆ ಚಾಲನೆ ದೊರಕಲಿದ್ದು ಎ. 16ರಂದು ಕೊನೆಯಾಗಲಿದೆ.

2021-22ರ ಕಂಬಳಕೂಟದ ಪರಿಷ್ಕೃತ ವೇಳಾಪಟ್ಟಿ:

05-02-2022 ಶನಿವಾರ: ಬಾರಾಡಿ ಬೀಡು ಕಂಬಳ
13-02-2022 ರವಿವಾರ: ಅಡ್ವೆ ನಂದಿಕೂರ್
19-02-2022 ಶನಿವಾರ: ವಾಮಂಜೂರು ಕಂಬಳ
26-02-2022 ಶನಿವಾರ: ಐಕಳ ಬಾವ ಕಂಬಳ
05-03-2022 ಶನಿವಾರ: ಪೈವಳಿಕೆ ಕಂಬಳ
12-03-2022 ಶನಿವಾರ: ಕಟಪಾಡಿ ಕಂಬಳ
19-03-2022 ಶನಿವಾರ: ಪುತ್ತೂರು ಕಂಬಳ
26-03-2022 ಶನಿವಾರ: ಬಂಗ್ರಕೂಳೂರು, ಮಂಗಳೂರು ಕಂಬಳ
2-04-2022: ಉಪ್ಪಿನಂಗಡಿ
9-04-2022: ಬಂಗಾಡಿ
16-04-2022: ವೇಣೂರು

Also Read  ರಾಜ್ಯದಲ್ಲಿ ಈವರೆಗೆ 1,784 ಬ್ಲ್ಯಾಕ್ ಫಂಗಸ್ ಪತ್ತೆ..!

error: Content is protected !!
Scroll to Top